ಕೀವ್: ಯುದ್ಧ ಪೀಡಿತ ಉಕ್ರೇನ್ ಗೆ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಮತ್ತು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ದಿಢೀರ್ ಭೇಟಿ ನೀಡಿದ್ದಾರೆ.
ನಿನ್ನೆ ರಷ್ಯಾ ಸೇನೆ ಶನಿವಾರ ಶಾಲೆಯ ಮೇಲೆ ಬಾಂಬ್ ದಾಳಿ ಮಾಡಿತ್ತು. ದಾಳಿಯಿಂದಾಗಿ ಶಾಲೆಯ ಬೇಸ್ ಮೆಂಟ್ ನಲ್ಲಿ ಆಶ್ರಯ ಪಡೆದಿದ್ದ 60 ಜನರು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ದಾಳಿಯ ಬೆನ್ನಲ್ಲೇ ಭಾನುವಾರ ಜಿಲ್ ಬೈಡನ್ ಉಕ್ರೇನ್ ಗೆ ಭೇಟಿ ನೀಡಿದ್ದು, ಉಕ್ರೇನ್ ನ ಪ್ರಥಮ ಮಹಿಳೆ ಒಲೆನಾ ಝೆಲೆನ್ ಸ್ಕಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
The moment First Ladies Jill Biden 🇺🇸 and Olena Zelenska 🇺🇦met today in Uzhhorod, Ukraine pic.twitter.com/9UsdBBA6Eh
— Michael LaRosa (@MichaelLaRosa46) May 8, 2022
ಇನ್ನು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಉಕ್ರೇನ್ ರಾಜಧಾನಿ ಪಕ್ಕದಲ್ಲಿರುವ ಇರ್ಪಿನ್ ಗೆ ಭೇಠಿ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು ಉಕ್ರೇನ್ ಗೆ ಭೇಟಿ ನೀಡಿ ಉಕ್ರೇನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಅವರೊಂದಿಗೆ ಚರ್ಚೆ ನಡೆಸಿದ್ದರು.