ಬೆಂಗಳೂರು : ಇಂದಿನಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಶುರುವಾಗಲಿದ್ದು, ಕೋಲಾರದ ಮುಳಬಾಗಿಲಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮಧ್ಯಾಹ್ನ 12.30ಕ್ಕೆ ಸಮಾವೇಶ ನಡೆಸಲಿದ್ದಾರೆ.
ಇಂದೇ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಣೆಯಾಗಲಿದೆ. ದಳಪತಿ 80 ಕ್ಷೇತ್ರಗಳ ಲಿಸ್ಟ್ ರೆಡಿ ಮಾಡಿದ್ಧಾರೆ. ಇಂದೇ ಲಿಸ್ಟ್ ಘೋಷಿಸಿ 2023ರ ಎಲೆಕ್ಷನ್ಗೆ ರಣಕಹಳೆ ಕೂಗಲಿದ್ಧಾರೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು ಭಾಗದ ಕಾರ್ಯಕರ್ತರ ಸಮಾವೇಶ ನಡೆಯಲಿದೆ.
ಕಾಂಗ್ರೆಸ್, ಬಿಜೆಪಿಗೆ ಠಕ್ಕರ್ ಕೊಡಲು ದಳಪತಿಗಳ ಬಿಗ್ ಪ್ಲಾನ್ ಮಾಡಿದ್ದು, ಹಳೇ ಮೈಸೂರು, ಕರಾವಳಿ ಭಾಗ, ಕಲ್ಯಾಣ ಕರ್ನಾಟಕ ಪ್ರದೇಶ, ಕಿತ್ತೂರು ಕರ್ನಾಟಕ ಭಾಗದಲ್ಲಿ ಹೆಚ್ಡಿಕೆ ರಥಯಾತ್ರೆ ನಡೆಸಲಿದ್ಧಾರೆ.ಮಿಷನ್-123 ಟಾರ್ಗೆಟ್ ಮುಟ್ಟಲು ಹೆಚ್ಡಿಕೆ ಮೆಗಾ ಪ್ಲಾನ್ ನಡೆಸಿದ್ಧಾರೆ. ಆರೋಗ್ಯ, ಶಿಕ್ಷಣ, ಕೃಷಿ, ವಸತಿ, ಮಹಿಳಾ, ಯುವಕರ ಸಬಲೀಕರಣ ಸಂಕಲ್ಪ ಹಾಗೂ ಹೆಚ್ಡಿಕೆ ತೆಲಂಗಾಣ ಸಿಎಂ KCR ಮಾದರಿಯಲ್ಲಿ ಯೋಜನೆ ರೂಪಿಸಿದ್ಧಾರೆ. ಪಂಚರತ್ನ ರಥಯಾತ್ರೆ ಜತೆಗೆ ಗ್ರಾಮ ವಾಸ್ತವ್ಯ ನಡೆಸಲಿದ್ದು, ಯಾತ್ರೆ ಕೊನೆಗೊಳ್ಳುವ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೆಚ್ಡಿಕೆ ರೈತರು, ವಿವಿಧ ವರ್ಗಗಳ ಜನರ ಜತೆ ಚರ್ಚೆ ಮಾಡಲಿದ್ದಾರೆ. ಮುಳಬಾಗಿಲು ಸಮಾವೇಶಕ್ಕೆ 3 ಲಕ್ಷ ಜನರು ಸೇರುವ ಸಾಧ್ಯತೆಗಳಿವೆ. ಮೊದಲ ಹಂತದಲ್ಲಿ 6 ಜಿಲ್ಲೆ 36 ಕ್ಷೇತ್ರಗಳಲ್ಲಿ ರಥಯಾತ್ರೆ ಮಾಡಲಿದ್ಧಾರೆ.
ಮೊದಲ ಹಂತದಲ್ಲಿ 6 ಜಿಲ್ಲೆ 36 ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಸಲಿದ್ದು, ಇಂದು ಊರುಕುಂಟೆ ಮಿಟ್ಟೂರಿನಲ್ಲಿ ಹೆಚ್ಡಿಕೆ ಗ್ರಾಮ ವಾಸ್ತವ್ಯ ಹೂಡಲಿದ್ಧಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಊರುಕುಂಟೆಯಾಗಿದೆ. ಕುಮಾರಸ್ವಾಮಿ ಪ್ರತಿದಿನ ಸಂಜೆ ಒಂದು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.18 ರಿಂದ 22 ರವರೆಗೆ ಕೋಲಾರ, ನ.23ರಿಂದ 27ರವರೆಗೆ ಚಿಕ್ಕಬಳ್ಳಾಪುರ , ನವೆಂಬರ್ 28 ರಿಂದ 30 ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಡಿ.1 ರಿಂದ 14: ತುಮಕೂರು, ಡಿ.15ರಿಂದ 20ರವರೆಗೆ ರಾಮನಗರ ಜಿಲ್ಲೆ, ಡಿ. 21 ರಿಂದ 27 ರವರೆಗೆ ಮಂಡ್ಯ ಜಿಲ್ಲೆಯಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.
ಇದನ್ನೂ ಓದಿ : ಈವರೆಗೂ KGF ಬಾಬು ಎಷ್ಟು ಸಾವಿರ ಚೆಕ್ ವಿತರಣೆ ಮಾಡಿದ್ದಾರೆ ಗೊತ್ತಾ..?