ಮೈಸೂರು : ಚಾಮುಂಡೇಶ್ವರಿ ಕ್ಷೇತ್ರದ ಆಪ್ತರು GTDಗೆ ಕೈಕೊಡುತ್ತಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಸ್ಥಳೀಯರು ಕೈಜೋಡಿಸ್ತಿದ್ದಾರೆ. JDS ಶಾಸಕ ಜಿ.ಟಿ.ದೇವೇಗೌಡಗೆ ಆಪ್ತರಿಂದಲೇ ಬಿಗ್ ಶಾಕ್ ಆಗಿದೆ.
ಜಿಟಿಡಿ ಆಪ್ತರು ವೇದಿಕೆಯಲ್ಲೇ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ಮಾದೇಗೌಡ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ದೇಗೌಡ ಶಾಕ್ ಆಗಿದ್ದಾರೆ. ಶಾಸಕ ಜಿ.ಟಿ.ದೇವೇಗೌಡರ ವಿರುದ್ದ ಮುಖಂಡರು ತಿರುಗಿ ಬಿದ್ದಿದ್ದಾರೆ. ನಿನ್ನೆಯಷ್ಟೇ ಜೆಡಿಎಸ್ಗೆ ರಾಜೀನಾಮೆ ನೀಡಿ ಸಿದ್ದುಗೆ ಸಾಥ್ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಪ್ತರು ಜಿಟಿಡಿ ಸೋಲಿಸುವ ಹಠಕ್ಕೆ ಬಿದ್ದಿದ್ದಾರೆ. ಈ ಹಿಂದೆ ಜಿಟಿಡಿ ಕಾಂಗ್ರೆಸ್ ಸೇರುವ ಪ್ಲಾನ್ ಮಾಡಿಕೊಂಡಿತ್ತು. ದೇವೇಗೌಡರು, ಹೆಚ್ಡಿಕೆ ಮನವೊಲಿಕೆ ನಂತರ ಜೆಡಿಎಸ್ನಲ್ಲೇ ಉಳಿದ್ರು. ಜಿಟಿಡಿ ಉಳಿದ್ರೂ ಅವರ ಕೆಲ ಪ್ರಮುಖು ಆಪ್ತರಿಂದ ರಾಜೀನಾಮೆ ನೀಡಲಿಲ್ಲ.
ಇದನ್ನೂ ಓದಿ : ಮತ್ತಷ್ಟು ಬಿಗಡಾಯಿಸಿದ ನಟಿ ಸಮಂತಾ ಆರೋಗ್ಯ ಸಮಸ್ಯೆ… ಟ್ರೀಟ್ಮೆಂಟ್ಗಾಗಿ ದಕ್ಷಿಣ ಕೊರಿಯಾಗೆ ಶಿಫ್ಟ್..