ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನ ಅಲ್ಪಸಂಖ್ಯಾತ ಮುಖಂಡ ನಿಕ್ಕರ್ ಸ್ವಾಮಿ ಎಂದು ಕರೆದಿದ್ದಾರೆ.
ಕೋಲಾರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಸಂಬಂಧ ಕೋಲಾರ ಪತ್ರಕರ್ತರ ಭವನದಲ್ಲಿ ಮಾತನಾಡಿದ ಮಾಜಿ ನಗರ ಸಭೆ ಉಪಾಧ್ಯಕ್ಷ, ಜೆಡಿಎಸ್ ಅಲ್ಪಸಂಖ್ಯಾತರ ಮುಖಂಡ ಖಲೀಲ್ ಅಹ್ಮದ್ , ಬಿಜೆಪಿಯೊಂದಿಗೆ ಶಾಮೀಲಾಗಿರುವ ರಮೇಶ್ ಕುಮಾರ್ ಕೆ.ಎಚ್.ಮುನಿಯಪ್ಪ ಅವರನ್ನ ಮುಗಿಸಿದ್ರು, ಇದೀಗ ಸಿದ್ದರಾಮಯ್ಯ ಅವರನ್ನ ಕೋಲಾರಕ್ಕೆ ಕರೆತಂದು ಮುಗಿಸಲು ಹೊರಟಿದ್ದಾರೆ.
ಶ್ರೀನಿವಾಸಪುರದಲ್ಲಿ ಸೋಲುವ ಭೀತಿಯಿಂದಾಗಿ, ಒಕ್ಕಲಿಗರು ಹಾಗೂ ಅಲ್ಪಸಂಖ್ಯಾತರು ನಮ್ಮ ಪರವಾಗಿ ಇದ್ದಾರೆ ಎಂದು ಸಿದ್ದರಾಮಯ್ಯ ಅವರನ್ನ, ನಿಕ್ಕರ್ ಸ್ವಾಮಿ ಆಹ್ವಾನಿಸುತ್ತಿದ್ದಾರೆ, ಇದೆಲ್ಲಾ ನಿಮ್ಮ ಗಿಮಿಕ್ ನಡೆಯಲ್ಲ ಇದಕ್ಕೆ ತಕ್ಕ ಉತ್ತರ ಸಿಗಲಿದೆ, ಆರ್.ಎಸ್.ಎಸ್ ನಿಂದ ಸುಪಾರಿ ತೆಗೆದುಕೊಂಡು ಕೆಲಸ ಮಾಡುತ್ತಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್,ಸಿದ್ದರಾಮಯ್ಯ ಅವರನ್ನ ಮುಗಿಸಲು ಮುಂದಾಗಿದ್ದಾರೆ.
ಇದೇ ವೇಳೆ ಶಾಸಕ ಶ್ರೀನಿವಾಸಗೌಡ ಅವರ ವಿರುದ್ದವೂ ಏಕವಚನದಲ್ಲಿ ವಾಗ್ದಾಳಿ ನಡೆಸಿ ಶ್ರೀನಿವಾಸಗೌಡ ಅವನಿಗೆ ಕೋಲಾರದಲ್ಲಿ ಏನು ಬಲವಿದೆ, ಬೈರೇಗೌಡ ಶಿಷ್ಯ ಎಂದು ಹೇಳಿಕೊಂಡು ಜೆಡಿಎಸ್ ನಲ್ಲಿದ್ದು, ಇದೀಗ ಕಾಂಗ್ರೇಸ್ ನಲ್ಲಿ ನಾಯಿಯಂತೆ ಇದ್ದಾನೆ ಎಂದು ಹೇಳಿದ್ದಾರೆ.