ದೇವನಹಳ್ಳಿ: JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪಯಾಗಿದ್ದು, ವಾರ ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆ ನಿಗೂಢ ನಾಪತ್ತೆಗೆ ಕಾರಣವೇನು, ಇದರ ಹಿಂದೆ ಯಾರ ಕೈವಾಡವಿದೆ ಎಂದು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಮಾರ್ಚ್ 29ರಂದು ನಿಗೂಢವಾಗಿ ಬಿನ್ನಿಪೇಟೆ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಪತಿ ಲೋಹಿತ್ಗಾಗಿ ನಾಪತ್ತೆಯಾಗಿದ್ದು, ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ಈ ಪ್ರಕರಣದ ಬಗ್ಗೆ ತೀವ್ರ ಶೋಧ ನಡೆಸಲಅಗುತ್ತಿದ್ದು, ನಿಗೂಢ ನಾಪತ್ತೆಗೆ ಕಾರಣವೇನು ನಾಪತ್ತೆ ಹಿಂದೆ ಯಾರ ಕೈವಾಡವಿದೆ ಎಂದು ಪೊಲೀಸ್ ತನಿಖೆ ನಡೆಸಲಾಗುತ್ತಿದೆ.
ಮಾರ್ಚ್ 29ರಂದು ಹೊಸಕೋಟೆ ತಾಲೂಕಿನ ನಂದಗುಡಿ ಬಳಿ ಹೆದ್ದಾರಿ ಪಕ್ಕದಲ್ಲಿ ಲೋಹಿತ್ ಕಾರು ಪತ್ತೆಯಾಗಿತ್ತು. ದೇಗುಲದ ಬಳಿ ಲೋಹಿತ್ ಚಪ್ಪಲಿ, ಬೆಲ್ಟ್ ಸಿಕ್ಕಿತ್ತು. ಈ ಪ್ರಕರಣ ತನಿಖೆಗೆ 2 ವಿಶೇಷ ಪೊಲೀಸ್ ತಂಡ ನಿಯೋಜಿಸಲಾಗಿತ್ತು. 4 ಸಾವಿರಕ್ಕೂ ಹೆಚ್ಚು ಫೋನ್ ಕರೆಗಳ ಬಗ್ಗೆ ಪರಿಶೀಲನೆ ನಡೆಸಿ ಹೊಸಕೋಟೆ ಟೋಲ್ ಬಳಿಯ ಸಿಸಿ ಕ್ಯಾಮರಾ ಸೇರಿದಂತೆ, ರಸ್ತೆಬದಿಯ 100ಕ್ಕೂ ಅಧಿಕ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿತ್ತು. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.