ಬೆಂಗಳೂರು: ಬೆಂಗಳೂರಿನ ಯಲಹಂಕ ಉಪವಿಭಾಗದ ACPಯಾಗಿದ್ದ ಜಯರಾಮ್ ನಿಧನರಾಗಿದ್ದಾರೆ. ಹೃದಯಾಘಾತದಿಂದ ಜಯರಾಮ್ ನಿಧನರಾಗಿದ್ದಾರೆಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. 1994ರ ಬ್ಯಾಚ್ನ ಜಯರಾಮ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆಗೆ ಸೇರಿದ್ದರು. ಬೆಂಗಳೂರು ಸೇರೆ ಹಲವು ಕಡೆ ಜಯರಾಮ್ ಸೇವೆ ಸಲ್ಲಿಸಿದ್ದರು. ಕೋಲಾರದಲ್ಲಿರುವ ಹುಟ್ಟೂರಿನಲ್ಲಿ ಜಯರಾಮ್ ಅವರ ಅಂತ್ಯಸಂಸ್ಕಾರ ನೆರವೇರಲಿದೆ.