ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ ಜೇಮ್ಸ್ ನ ಪೋಸ್ಟರ್ ಅನ್ನು ನಾಳೆ ಬಿಡುಗಡೆ ಮಾಡಲಾಗುವುದು. ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಮುಂದೆ ಪೋಸ್ಟರ್ ರಿಲೀಸ್ ಆಗಲಿದೆ.
ನಾಳೆ ಬೆಳಗ್ಗೆ 11.11 ಕ್ಕೆ ಪೋಸ್ಟರ್ ರಿಲೀಸ್ ಮಾಡಲಾಗುವುದು ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
James special poster will be unveiled tomorrow at 11.11 AM.@PRKAudio @PriyaAnand #KishorePathikonda @BahaddurChethan @charanrajmr2701 #BoloBoloJames pic.twitter.com/wkYTkkSDhm
— Ashwini Puneeth Rajkumar (@ashwinipuneet) January 25, 2022
ಅಭಿಮಾನಿಗಳಲ್ಲಿ ಅಪಾರ ನಿರೀಕ್ಷೆ ಹುಟ್ಟಿಸಿರುವ ಜೇಮ್ಸ್ ಚಿತ್ರದ ಪೋಸ್ಟರ್ ಅನ್ನು ಅಪ್ಪು ಅಭಿಮಾನಿಗಳಿಂದಲೇ ರಿಲೀಸ್ ಮಾಡಿಸಲಾಗುತ್ತಿದ್ದು, ಅಭಿಮಾನಿಗಳ ಜೊತೆಯಲ್ಲಿ ರಾಜ್ ಕುಟುಂಬಸ್ಥರೂ ಸಹ ಭಾಗವಹಿಸಲಿದ್ದಾರೆ.