ಬೆಂಗಳೂರು : ಜನವರಿ 30 ರಂದು ಭಾರತ್ ಜೋಡೋ ಸಮಾರೋಪ ಸಮಾರಂಭ ಹಿನ್ನೆಲೆ ರಾಜ್ಯ ಕಾಂಗ್ರೆಸ್ ನಾಯಕರು ಶ್ರೀನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ ಹರಿಪ್ರಸಾದ್, ಮುನಿಯಪ್ಪ, ಎಂ.ಬಿ ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ಹೆಚ್.ಕೆ ಪಾಟೀಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮುಖಂಡರು ಜ.29 ರಂದು ಬೆಳಗ್ಗೆ ಹೊರಡಲಿದ್ದಾರೆ. ನಾಯಕರು ಬೆಂಗಳೂರಿನಿಂದ ನೇರವಾಗಿ ಪಂಜಾಬ್ ನ ಅಮೃತಸರಕ್ಕೆ ತೆರಳಲಿದ್ದು, ಬಳಿಕ ಅಮೃತಸರದಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಅಂತಿಮ ಘಟಕ್ಕೆ ತಲುಪಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ರಾಜ್ಯದಲ್ಲೂ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ 21 ದಿನಗಳ ಕಾಲ ಯಾತ್ರೆ ಸಾಗಿತ್ತು.
ಇದನ್ನೂ ಓದಿ : ಹಣ ಬೇಡಿಕೆ ಇಟ್ಟಿದ್ದರೆ ತನಿಖೆ ಆಗುತ್ತೆ.. ವಿಡಿಯೋ, ಆಡಿಯೋ ಸಾಚಾತನ ಗೊತ್ತಾಗಬೇಕು : R.D.ಪಾಟೀಲ್ 3 ಕೋಟಿ ಆರೋಪಕ್ಕೆ ಸಿಎಂ ರಿಯಾಕ್ಷನ್…