ಈ ಕಾಲೇಜಿನಲ್ಲಿ ಓದಬೇಕಾದರೆ ಹುಡುಗಿಯರಿಗೆ ಕಡ್ಡಾಯವಾಗಿ ಬಾಯ್ ಫ್ರೆಂಡ್ ಇರಬೇಕಂತೆ. ಅರೇ ಎಲ್ಲಿ ಯಾವುದು ಆ ಕಾಲೇಜು ಏನಿದರ ಕಥೆ ಅಂತೀರಾ ಈ ಸ್ಟೋರಿ ಓದಿ…
ಹೌದು, ಈ ಕಾಲೇಜು ಇರೋದು ಒಡಿಶಾದ ಜಗತ್‌ಸಿಂಗ್‌ಪುರಲ್ಲಿ. ಎಸ್‌ವಿಎಂ ಕಾಲೇಜಿನ ನೋಟಿಸ್‌ನಲ್ಲಿ ಎಲ್ಲ ವಿದ್ಯಾರ್ಥಿನಿಯರು ವ್ಯಾಲಂಟೈನ್ಸ್ ಡೇ ಹೊತ್ತಿಗೆ ಕಡ್ಡಾಯವಾಗಿ ಬಾಯ್‌ಫ್ರೆಂಡ್ ಹೊಂದಿರಬೇಕು ಎಂದು ಹಾಕಲಾಗಿತ್ತು. ಇದೀಗ ಈ ವಿಚಾರ ಭಾರಿ ಗೊಂದಲ ಸೃಷ್ಟಿಸಿದೆ.
ಈ ನೋಟಿಸ್ ಫೇಕ್ ಆಗಿದ್ದು, ನೋಟಿಸ್‌ನಲ್ಲಿ ಪ್ರಾಂಶುಪಾಲರ ಸಹಿಯನ್ನು ನಕಲು ಮಾಡಲಾಗಿದೆ. ಸುಳ್ಳು ನೋಟಿಸ್ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಇನ್ನೂ ಈ ಕುರಿತಂತೆ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:K.R ಮಾರ್ಕೆಟ್ ನಲ್ಲಿ ಹಣ ಎಸೆದ ಅರುಣ್ ಗೆ ನೋಟಿಸ್ ನೀಡಿದ ಪೊಲೀಸರು..