ಬೆಳಗಾವಿ : ಬೆಳಗಾವಿಯಲ್ಲಿ ಭಾರೀ ಮಳೆಯಿಂದಾಗಿ ಐಟಿ ಉದ್ಯೋಗಿ ಸಾವನಪ್ಪಿದ್ದಾರೆ.
ಬೆಳಗಾವಿಯಲ್ಲಿ ಸತತವಾಗಿ ಕಳೆದ 4 ದಿಗಳಿಂದ ಸುರಿಯುತ್ತಿರುವ ಮಳೆಗೆ RTO ವೃತ್ತದಲ್ಲಿ ಬೃಹತ್ ಮರವೊಂದು ಬೈಕ್ ಮೇಲೆ ಬಿದ್ದಿದೆ. ಈ ಪರಿಣಾಮ 25 ವರ್ಷದ ರಾಕೇಶ್ ಮೃತಪಟ್ಟಿದ್ದಾನೆ. ಆತನೊಂದಿಗೆ ತೆರಳುತ್ತಿದ್ದ ಮತ್ತೊಬ್ಬ ಸ್ವಲ್ಪಡರಲ್ಲೇ ಬಚಾವ್ ಆಗಿದ್ದಾನೆ. ಗೋಕಾಕ್ ತಾಲೂಕಿನ ಸಿದ್ನಳ್ಳಿ ಗ್ರಾಮದ ರಾಕೇಶ್ ಎಂಬುವವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು ಬೆಳಗಾವಿ ಉತ್ತರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.