ಬೆಂಗಳೂರು : ಎಮ್ಮೆಗಳ ವಿರುದ್ಧ ಟೆಕ್ಕಿಗಳು ದೂರು ಕೊಟ್ಟಿದ್ದು, ಬೆಂಗಳೂರಲ್ಲಿ ಎಮ್ಮೆ ಕಾಟಕ್ಕೆ ಐಟಿ-ಬಿಟಿ ಉದ್ಯೋಗಿಗಳು ಕಂಗಾಲ್ ಆಗಿದ್ದಾರೆ. ಪ್ರತಿ ನಿತ್ಯ ಎಮ್ಮೆಗಳಿಂದ ತೊಂದರೆ ಆಗ್ತಿದೆ ಅಂತಾ ದೂರು ಸಲ್ಲಿಸಿದ್ದಾರೆ.
ಟ್ವಿಟರ್ ಮೂಲಕ ಟ್ರಾಫಿಕ್ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ.
ಮಾರ್ನಿಂಗ್ ಟೈಮ್ನಲ್ಲಿ , ಆಫೀಸ್ ಹೊತ್ತಲ್ಲಿ ಎಮ್ಮೆಗಳಿಂದ ಪ್ರಾಬ್ಲಂ ಆಗುತ್ತಿದ್ದು, ಆಫೀಸ್ ರೂಟ್ನಲ್ಲಿ ದಿಢೀರ್ ಅಂತಾ ಎಮ್ಮೆ ಎಂಟ್ರಿ ಕೊಟ್ಟು ಟ್ರಾಫಿಕ್ ಆಗ್ತಿದೆ. ಸರದಿ ಸಾಲಿನಲ್ಲಿ ಎಮ್ಮೆಗಳು ಬರೋದ್ರಿಂದ 30-45 ನಿಮಿಷ ಟ್ರಾಫಿಕ್ ಆಗ್ತಿದೆ. ಕಸವನಹಳ್ಳಿ ರೋಡ್ನಲ್ಲಿ ನಿತ್ಯ ಎಮ್ಮೆ ಕಿರಿಕ್ ಅನುಭವಿಸುತ್ತಿದ್ದೇವೆ ಎಂದು ದೂರು ಸಲ್ಲಿಸಿದ್ದಾರೆ. ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ಸಲ್ಲಿಸಿದೆ. ಆರೇಳು ತಿಂಗಳಿಂದ ಎಮ್ಮೆ ಸಮ್ಯಸೆಯಿಂದ MNC ಟೆಕ್ಕಿಗಳು ಕಂಗಾಲಾಗಿದ್ದಾರೆ. ಎಮ್ಮೆಗಳಿಂದ ಆಫೀಸ್ಗೆ ಹೋಗಲು ನಿತ್ಯ ತಡವಾಗ್ತಿದೆ ಎಂದು ದೂರು ಸಲ್ಲಿಸಿದ್ದಾರೆ.
ಇದನ್ನೂ ಓದಿ : ಚಾಮರಾಜಪೇಟೆ ಮೈದಾನದಲ್ಲಿ ಗಣರಾಜ್ಯೋತ್ಸ ಆಚರಣೆಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್…