ಇಸ್ತಾನ್ಬುಲ್ : ನಮ್ಮ ದೇಶದಲ್ಲಿ ಸಾಕಿರುವ ನಾಯಿಯನ್ನು ತಮ್ಮ ಮನೆಯ ಒಬ್ಬ ಸದಸ್ಯನಾಗಿ ನೋಡಕೋತಾರೆ, ಅದೇ ಬೀದಿ ನಾಯಿ ಕಂಡ್ರೆ ಸಾಕು ಮುಖನಾ ಒಂದು ತರ ಮಾಡ್ಕೋತಾರೆ.. ಅದನ್ನು ಓಡಿಸೋಕೆ ಕಾಯುತ್ತಾ ಇರುತ್ತಾರೆ.. ನಾಯಿಗೆ ಇರೋ ನಿಯತ್ತು ಮನುಷ್ಯನಿಗೆ ಇಲ್ಲ ಎಂದು ಗಾದೆನೇ ಇದೆ.. ಯಾಕ್ ಈಗ ನಾಯಿ ಬಗ್ಗೆ ಹೇಳತ್ತಿದ್ದೀವಿ ಅಂತ ಯೋಚನೆ ಮಾಡ್ತೀರಾ ಇಲ್ಲಿದೆ ನೋಡಿ ಇಂಟ್ರಾಸ್ಟಿಂಗ್ ಸ್ಟೋರಿ..
ಇಸ್ತಾನ್ಬುಲ್ ಟರ್ಕಿ ದೇಶದ ಒಂದು ದೊಡ್ಡ ನಗರವಾಗಿದ್ದು, ಅಲ್ಲಿನ ಒಂದು ಹೋಟೆಲ್, ಇಬ್ಬರು ವ್ಯಕ್ತಿಗಳು ತಿಂಡಿ ತಿನ್ನುತ್ತಾ ಕುಳಿತಿದ್ದರು. ಆಗ ಆ ಹೋಟೆಲ್ನೊಳಗೆ ಒಂದು ಬೀದಿ ನಾಯಿ ಬಂದಿತು. ಆ ಇಬ್ಬರು ಆ ನಾಯಿಯನ್ನು ಓಡಿಸಲು ಕೈ ಮಾಡಿದರು. ಅಷ್ಟರಲ್ಲಿ ಆ ಹೋಟೆಲ್ ಮಾಲೀಕ ಕೂಗಿಕೊಂಡ. ಅಯ್ಯೋ ಅವನನ್ನು ಓಡಿಸಬೇಡ್ರಪ್ಪ ಅವನು ಬೋಜಿ.
ಯಾರು ಈ ಬೋಜಿ ..?
ಈ ನಗರದಲ್ಲಿ ಈ ಬೀದಿನಾಯಿ ಪ್ರಯಾಣಿಕ ನಾಯಿ ಎಂದು ಹೆಸರುಗಳಿಸಿದೆ. ಇದನ್ನು ಎಲ್ಲಾರು ಪ್ರೀತಿಯಿಂದ ಬೋಜಿ ಎಂದು ಕರೆಯುತ್ತಾರೆ. ಈ ನಾಯಿ ದಿನಕ್ಕೆ 30 km ಊರಿನ ಮೆಟ್ರೋ, ಬಸ್ ಮತ್ತು ಹಡಗಿನಲ್ಲಿ ಯಾವಾಗಲು ಪ್ರಯಾಣ ಮಾಡ್ತಾ ಇರುತ್ತೆ. ಈ ಊರಿನ ಬಹುತೇಕ ಜನರು ಈ ಶ್ವಾನವನ್ನು ನಿತ್ಯ ನೋಡುತ್ತಾರೆ. ಅಷ್ಟೇ ಅಲ್ಲ ಈ ನಾಯಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತಾರೆ. ಇದಕ್ಕೆ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ 60000 ಗಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ.
ನಗರದ ಮುನ್ಸಿಪಾಲಿಟಿಯವರು ಈ ನಾಯಿ ಕೊರಳಲ್ಲಿ ಒಂದು ಜಿಪಿಎಸ್ ಟ್ರಾಕರ್ ಹಾಕಿದ್ದಾರೆ. ಕಾಲ ಕಾಲಕ್ಕೆ ಇದಕ್ಕೆ ಔಷಧಿಯನ್ನು ಕೊಡುತ್ತಾರೆ. ಈ ಟ್ರಾವೆಲ್ಲರ್ ಶ್ವಾನ ಯಾವ ಬಸ್ಸು, ಮೆಟ್ರೋ, ಹಡಗು ಕಂಡ ತಕ್ಷಣವೇ ಅದರಲ್ಲಿ ಪ್ರಯಾಣಕ್ಕೆ ಶುರು ಹಚ್ಕೊಂಡು ಬಿಡುತ್ತೆ. ಎಲ್ಲಿ ಹೋಗಬೇಕು, ಎಲ್ಲಿ ಇಳಿಯೋದು ಎಲ್ಲ ಗೊತ್ತಿರುವಂತೆ ವರ್ತಿಸುತ್ತ ಯಾರ ಬಳಿಯೂ ಹೋಗದೆ ತನ್ನ ಪಾಡಿಗೆ ಪ್ರಯಾಣ ಮಾಡುತ್ತಾ ಇರುತ್ತದೆ. ಈ ಪ್ರಯಾಣಿಕ ಶ್ವಾನದ ಜೀವನ ತುಂಬಾ ಮಜವಾಗಿದೆ.
ಇದನ್ನೂ ಓದಿ : ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು..! ಸಿಎಂ ಮನೆ ಮುಂದೆ ಧರಣಿಗೆ ಕೈ ನಾಯಕರ ನಿರ್ಧಾರ..!