ಬೆಂಗಳೂರು : ಇಂದು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಡಾ. ಸುಧಾಕರ್ ಕೆ ನಾನು ಮನೆಯಲ್ಲಿ ಕನ್ನಡ ಮಾತನಾಡುವ ಹೆಮ್ಮೆಯ ಕನ್ನಡಿಗ , ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಡಾ. ಸುಧಾಕರ್ ಕೆ, ನಾನು ಮನೆಯಲ್ಲಿ ಕನ್ನಡ ಮಾತನಾಡುವ ಹೆಮ್ಮೆಯ ಕನ್ನಡಿಗ ,ನಿಮ್ಮ ಮನೆಯಲ್ಲಿ ಯಾವ ಭಾಷೆ ಮಾತನಾಡುತ್ತೀರಿ? ನಿಮ್ಮ ಮಾತೃಭಾಷೆಯಲ್ಲಿ ಕೆಳಗೆ ಕಾಮೆಂಟ್ ಮಾಡಿ ಎಂದು ಪೋಸ್ಟ್ ಮಾಡಿದ್ದಾರೆ.
ಇನ್ನೂ ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಈ ದಿನವನ್ನ ಆಚರಿಸಲು ಕಾರಣ, ಭಾಷೆ ಭಾವುಕತೆಗೆ ಸಂಬಂಧಿಸಿದ ವಿಷಯ. ಅದಕ್ಕಾಗಿ ಪ್ರಾಣ ಕೊಟ್ಟವರಿದ್ದಾರೆ. ಬಾಂಗ್ಲಾದೇಶೀಯರು ತಮ್ಮ ಮಾತೃಭಾಷೆಗಾಗಿ ಹೋರಾಡಿದ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹತ್ವದ ದಿನದ ನೆನಪಿಗಾಗಿ ಪ್ರತಿ ವರ್ಷ ಫೆ.21 ನ್ನು ಅಂತಾರಾಷ್ಟ್ರೀಯ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. 1999 ರಲ್ಲಿ ಈ ದಿನವನ್ನು ಯುನೆಸ್ಕೋ ಗುರುತಿಸಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಯುವಕನ ಬರ್ಬರ ಕೊಲೆ : ಮತೀಯ ಗೂಂಡಾಗಳಿಂದಲೇ ಹರ್ಷ ಹತ್ಯೆ.. ಸಚಿವ ಕೆಎಸ್ ಈಶ್ವರಪ್ಪ..