ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಹೊತ್ತಲ್ಲೇ ಸಿಎಂಗೆ ಮೆಗಾ ರಿಪೋರ್ಟ್ ಸಲ್ಲಿಕೆಯಾಗಿದ್ದು, ಅದರಲ್ಲಿ ಈಗಲೇ ಎಲೆಕ್ಷನ್ ನಡೆದರೆ ಬಿಜೆಪಿಗೆ 100 ಸೀಟ್ ಬರಲಿದೆ ಎಂದು ತಿಳಿಸಲಾಗಿದೆ.
ಮೋದಿ ಅವರ ರಾಜ್ಯ ಭೇಟಿ ಫಿಕ್ಸ್ ಆಗುತ್ತಿದ್ದಂತೆ ಗುಪ್ತಚರ ಇಲಾಖೆ ರಹಸ್ಯ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಯ ವರದಿಯನ್ನು ಗುಪ್ತಚರ ಇಲಾಖೆ ಸಿಎಂಗೆ ಸಲ್ಲಿಸಿದೆ. ಅದರಲ್ಲಿ ಈಗಲೇ ಎಲೆಕ್ಷನ್ ನಡೆದರೆ ಬಿಜೆಪಿಗೆ 100 ಸೀಟ್ ಪಕ್ಕಾ ಬರಲಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಂಪರ್ ಬೆಳೆ ಬೆಳೆಯಲಿದೆ. ಬೆಂಗಳೂರಲ್ಲಂತೂ ಬಿಜೆಪಿಗೆ 28 ರಲ್ಲಿ 20 ಕ್ಷೇತ್ರದಲ್ಲಿ ಗೆಲುವು ದೊರೆಯಲಿದೆ.
ಹಳೇ ಮೈಸೂರು ಭಾಗದಲ್ಲಿ 66 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಸೀಟ್ ಸಾಧ್ಯತೆ ಇದೆ, ಕರಾವಳಿ ಭಾಗದ 19 ಸೀಟುಗಳ ಪೈಕಿ ಈ ಬಾರಿಯೂ 16 ಸೀಟ್ ಗೆಲ್ಲೋದು ಪಕ್ಕಾ. ಮಧ್ಯಕರ್ನಾಟಕದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲದ ಹೋರಾಟ ಕಂಡು ಬರಲಿದೆ. ಹೈದರಾಬಾದ್-ಕರ್ನಾಟಕದಲ್ಲೂ ಬಿಜೆಪಿಗೆ ಮೇಲುಗೈ ಸಾಧಿಸಲಿದೆ. ಮುಂಬೈ ಕರ್ನಾಟಕದಲ್ಲಿ ಬಿಜೆಪಿ ಈಗಿರುವ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಬಿಜೆಪಿಯ ಮಿಷನ್-150 ಗುರಿ ಸಾಧಿಸಲು ಮೆಗಾ ಪ್ಲ್ಯಾನ್ ರೂಪಿಸಲಾಗುತ್ತಿದ್ದು, ಆಗಸ್ಟ್ ಅಥವಾ ಅಕ್ಟೋಬರ್ ನಲ್ಲಿ ಮೋದಿ ಅವರು ರಾಜ್ಯದಲ್ಲಿ ಮತ್ತೆ ಹವಾ ಎಬ್ಬಿಸಲಿದ್ದಾರೆ. ಚಿತ್ರದುರ್ಗ ಅಥವಾ ದಾವಣಗೆರೆಯಲ್ಲಿ ಮೆಗಾ ಸಮಾವೇಶ ಆಯೋಜಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.