ಬೆಂಗಳೂರು: ಓಮಿಕ್ರಾನ್ ಸೋಂಕಿತನ ಕ್ವಾರಂಟೈನ್ ವಿಚಾರದಲ್ಲಿ BBMP ಎಡವಟ್ಟು ಮಾಡಿದ್ದು, ಕ್ವಾರಂಟೈನ್ನಲ್ಲಿದ್ದ ಸೋಂಕಿತ ವ್ಯಕ್ತಿ ವಿದೇಶಕ್ಕೆ ಹೋಗಿದ್ದಾನೆ. ಈ ಹಿನ್ನೆಲೆ ಸೋಂಕಿತ ಕ್ವಾರಂಟೈನ್ ಆಗಿದ್ದ ಹೋಟೆಲ್ ವಿರುದ್ಧ ಬಿಬಿಎಂ ಕ್ರಮ ಕೈಗೊಂಡಿದ್ದು, ಕೊರೋನಾ ಆಕ್ಟ್ ಅಡಿ ಹೋಟೆಲ್ ಮಾಲೀಕರಿಗೆ ನೋಟಿಸ್ ನೀಡಿದೆ.
ದಕ್ಷಿಣ ಆಫ್ರಿಕಾದಿಂದ ಬಂದಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಪಾಸಿಟಿವ್ ಬಂದಿದ್ದ ವ್ಯಕ್ತಿ ಶಾಂಗ್ರಿಲಾ ರೂಂನಲ್ಲಿ ಕ್ವಾರಂಟೈನ್ ಆಗಿದ್ದರು. ನವೆಂಬರ್ 20ರಂದು ಬಂದಿದ್ದ ಸೋಂಕಿತನನ್ನ 14 ದಿನ ಕ್ವಾರಂಟೈನ್ ಮಾಡಲು ವಿಫಲವಾಗಿದ್ದು, ಕ್ವಾರಂಟೈನ್ನಲ್ಲಿದ್ರೂ ವೈದ್ಯಕೀಯ ಸಮ್ಮೇಳನದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಡಲಾಗಿದೆ. ಜೀನೋಮ್ ಸೀಕ್ವೆನ್ಸಿಂಗ್ ರಿಪೋರ್ಟ್ಗೂ ಮುನ್ನ ಸೋಂಕಿತ ನಕಲಿ ನೆಗೆಟಿವ್ ರಿಪೋರ್ಟ್ ತೋರಿಸಿ ನವೆಂಬರ್ 27ರಂದು ಮಧ್ಯರಾತ್ರಿ 12.34ಕ್ಕೆ ಎಸ್ಕೇಪ್ ಆಗಿದ್ದು, ವ್ಯಕ್ತಿ ಎಸ್ಕೇಪ್ ಆದ ಬಳಿಕ ಓಮಿಕ್ರಾನ್ ಸೋಂಕಿರೋ ರಿಪೋರ್ಟ್ ಬಂದಿದೆ. ಸೋಂಕಿತ ರೂಂ ಖಾಲಿ ಮಾಡಿರೋ ವಿಚಾರವನ್ನ ಶಾಂಗ್ರಿಲಾ ಹೋಟೆಲ್ ಬಿಬಿಎಂಪಿಗೂ ತಿಳಿಸಿಲ್ಲ ಈ ಆರೋಪದ ಮೆಲೆ BBMP ಹೋಟೆಲ್ ಮಾಲೀಕರಿಗೆ ಕೊರೋನಾ ಆ್ಯಕ್ಟ್ ಅಡಿ ನೋಟಿಸ್ ನೀಡಿದೆ.
ಇದನ್ನೂ ಓದಿ:ಡಿಸೆಂಬರ್‌ನ ಐದೇ ದಿನಗಳಲ್ಲಿ ಭರ್ಜರಿ ಫೈನ್… ಮಾಸ್ಕ್ ಧರಿಸದವರಿಂದ 9.26 ಲಕ್ಷ ದಂಡ ವಸೂಲಿ ಮಾಡಿದ ಮಾರ್ಷಲ್‌ಗಳು..!