ನವದೆಹಲಿ: ಆಪರೇಷನ್ ಗಂಗಾ ಹೆಸರಲ್ಲಿ ಭಾರತೀಯರ ಏರ್ಲಿಪ್ಟ್ ಮಾಡಲಾಗಿದ್ದು, ಒಂದೇ ದಿನ 698 ಮಂದಿ ಭಾರತೀಯರ ರಕ್ಷಣೆ ಮಾಡಲಾಗಿದೆ.
ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಗಂಗಾ’ ಹೆಸರಿನಲ್ಲಿ ಕೇಂದ್ರ ಸರ್ಕಾರ ಕಾರ್ಯಾಚರಣೆ ಆರಂಭಿಸಿದ್ದು, ನಿನ್ನೆ ಒಂದೇ ದಿನ ಮೂರು ವಿಶೇಷ ವಿಮಾನಗಳಲ್ಲಿ 688 ಮಂದಿಯನ್ನು ತವರಿಗೆ ಕರೆತರಲಾಗಿದೆ. ಈ ಮೂಲಕ ಕಳೆದೆರಡು ದಿನಗಳಲ್ಲಿ ಉಕ್ರೇನ್‌ನಿಂದ ಭಾರತಕ್ಕೆ ವಾಪಸ್ ಆದವರ ಸಂಖ್ಯೆ 907 ಕ್ಕೇರಿಕೆಯಾಗಿದೆ. ಹಂಗೇರಿಯ ಬುಡಾಪೆಸ್ಟ್‌ನಿಂದ 3ನೇ ವಿಮಾನದಲ್ಲಿ 240 ಹಾಗೂ 4ನೇ ವಿಮಾನ ಬುಕರೆಸ್ಟ್‌ನಿಂದ 198 ಭಾರತೀಯರು ದೆಹಲಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ:ನ್ಯಾಟೋ ಪಡೆ ದಾಳಿ ನಡೆಸಬಹದು ಸಿದ್ಧರಾಗಿ..! ಪರಮಾಣು ಪ್ರತಿಬಂಧಕ ಪಡೆಗೆ ಪುಟಿನ್ ಅಲರ್ಟ್..!