ಬರ್ಮಿಂಗ್ ಹ್ಯಾಂ: ಕಾಮನ್ ವೆಲ್ತ್ ಗೇಮ್ಸ್ ನ ಟೇಬಲ್ ಟೆನಿಸ್ ನಲ್ಲಿ ಭಾರತ ಪುರುಷರ ತಂಡ ಸಿಂಗಾಪುರ ವಿರುದ್ಧ ಗೆಲುವು ಸಾಧಿಸುವ ಮೂಲಕ ಚಿನ್ನದ ಪದಕ ಜಯಿಸಿದೆ. ಈ ಮೂಲಕ ಕ್ರೀಡಾ ಕೂಟದಲ್ಲಿ ಐದನೆಯ ಚಿನ್ನದ ಪದಕವನ್ನು ಭಾರತ ಜಯಿಸಿತು.
ಭಾರತ ಪುರುಷರ ತಂಡ 3-1 ಅಂತರದಿಂದ ಸಿಂಗಾಪುರವನ್ನು ಸೋಲಿಸುವ ಮೂಲಕ ಚಿನ್ನದ ಪದಕ ಜಯಿಸಿತು. ಮೊದಲ ಪಂದ್ಯದಲ್ಲಿ ಸತ್ಯನ್ ಜ್ಞಾನಶೇಖರನ್ ಮತ್ತು ಹರ್ಮೀತ್ ದೇಸಾಯಿ ಜೋಡಿ ಗೆಲುವು ಸಾಧಿಸುವ ಮೂಲಕ 1-0 ಇಂದ ಮುನ್ನಡೆ ದೊರಕಿಸಿಕೊಟ್ಟರು.
ಆದರೆ 2 ನೇ ಪಂದ್ಯದಲ್ಲಿ ಅನುಭವಿ ಆಟಗಾರ ಶರತ್ ಕಮಲ್ ಅವರು ಸೋಲನುಭವಿಸುವ ಮೂಲಕ ಸಿಂಗಾಪುರ 1-1 ರಿಂದ ಸಮಬಲ ಸಾಧಿಸಿತು. ಆದರೆ ಸತ್ಯನ್ ಜ್ಞಾನಶೇಖರನ್ ಮತ್ತು ಹರ್ಮೀತ್ ದೇಸಾಯಿ ತಮ್ಮ ಸಿಂಗಲ್ಸ್ ಪಂದ್ಯಗಳನ್ನು ಜಯಿಸುವ ಮೂಲಕ ತಂಡಕ್ಕೆ 3-1 ಅಂತರದಿಂದ ಜಯ ದೊರಕಿಸಿಕೊಟ್ಟರು.
ಭಾರತ ಪುರುಷರ ತಂಡ 2018 ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಜಯಿಸಿತ್ತು.
3⃣rd GOLD FOR MEN'S TEAM 🏓🏓 at #CommonwealthGames 🔥🔥🔥#TeamIndia🇮🇳 defeat Team Singapore 🇸🇬 3️⃣-1️⃣ in the FINAL, defending their 2018 CWG 🥇
Bringing home 1️⃣1️⃣th Medal for India at @birminghamcg22
Superb Champions!!#Cheer4India#India4CWG2022
1/1 pic.twitter.com/MgIcBmMl2o— SAI Media (@Media_SAI) August 2, 2022