ಕಾಬೂಲ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ಸರ್ಕಾರ ರಚಿಸಿದ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ನಿಯೋಗವೊಂದು ಆಫ್ಘನ್ ಗೆ ಭೇಟಿ ನೀಡಿದ್ದು, ತಾಲಿಬಾನಿ ನಾಯಕರೊಂದಿಗೆ ಮಾತುಕತೆ ನಡೆಸಿದೆ.
ಕಳೆದ ವರ್ಷ ಆಗಸ್ಟ್ ನಲ್ಲಿ ಅಮೆರಿಕ ಸೇನೆ ಆಫ್ಘನ್ ನಿಂದ ವಾಪಸ್ ತೆರಳುವಾಗ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಅಫ್ಘಾನಿಸ್ತಾನದಲ್ಲಿದ್ದ ಎಲ್ಲಾ ಭಾರತೀಯ ಅಧಿಕಾರಿಗಳನ್ನು ವಾಪಸ್ ಕರೆತರಲಾಗಿತ್ತು. ಆದರೂ ಅಫ್ಘಾನಿಸ್ತಾನದಲ್ಲಿರುವ ಸ್ಥಳೀಯ ಸಿಬ್ಬಂದಿ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಸಾವಿರಾರು ವರ್ಷಗಳ ಸಂಬಂಧವಿದೆ. ಈ ಹಿನ್ನೆಲೆಯಲ್ಲಿ ಈ ಸಂಬಂಧವನ್ನು ಮುಂದುವರೆಸಲು ಭಾರತ ಬಯಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
ಭಾರತೀಯ ನಿಯೋಗ ಹಿರಿಯ ತಾಲಿಬಾನಿ ನಾಯಕರನ್ನು ಭೇಟಿ ಮಾಡಲಿದ್ದು, ಭಾರತ ಅಫ್ಘಾನಿಸ್ತಾನಕ್ಕೆ ನೀಡಿರುವ ನೆರವು ಮತ್ತು ಭಾರತ ನಿರ್ಮಿಸಿರುವ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ಭಾರತದ ನೆರವಿನಿಂದ ನಿರ್ಮಾಣವಾಗಿರುವ ಯೋಜನೆಗಳನ್ನು ಪರಿಶೀಲಿಸಲು ಭಾರತೀಯ ನಿಯೋಗ ಪ್ರಯತ್ನಿಸಲಿದೆ ಎಂದು ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.
#WATCH | MEA Joint Secretary JP Singh, who is heading a multi-member team to Afghanistan, visits the Chimtala Electricity Substation, built by Powergrid Corporation of India at Chimtala, close to Kabul. pic.twitter.com/LxAG0j6Ctq
— ANI (@ANI) June 2, 2022
ಭಾರತ ತಾಲಿಬಾನಿ ಸರ್ಕಾರಕ್ಕೆ ಮಾನ್ಯತೆ ನೀಡಿಲ್ಲ. ಇದೇ ವೇಳೆ ತಾಲಿಬಾನಿಗಳು ಭಾರತದೊಂದಿಗೆ ವ್ಯಾಪಾರವನ್ನು ಮರು ಆರಂಭಿಸಲು ಮನವಿ ಮಾಡಿದ್ದಾರೆ.
2001ರ ಸೆಪ್ಟೆಂಬರ್ 11 ರಂದು ಅಮೆರಿಕದ ಟ್ವಿನ್ ಟವರ್ ಮೇಲೆ ನಡೆದ ದಾಳಿಯ ಬಳಿಕ ಅಮೆರಿಕ ಸೇನೆ ಅಫ್ಘಾನಿಸ್ತಾನದಲ್ಲಿ ಅಡಗಿದ್ದ ಅಲೈ ಖೈದಾ ಉಗ್ರರು ಮತ್ತು ಒಸಾಮ ಬಿನ್ ಲಾಡೆನ್ ಮೇಲೆ ಯುದ್ಧ ಸಾರಿತ್ತು. ಆ ಬಳಿಕ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್ ಸರ್ಕಾರವನ್ನು ಕಿತ್ತೊಗೆದು ನೂತನ ಸರ್ಕಾರ ರಚನೆಗೆ ನೆರವು ನೀಡಿತ್ತು. 20 ವರ್ಷ ಅಮೆರಿಕ ಬೆಂಬಲಿತ ಸರ್ಕಾರ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ವ್ಯಾಪಾರ ವಹಿವಾಟು ವೃದ್ಧಿಸಿತ್ತು ಮತ್ತು ಭಾರತ ಸರ್ಕಾರ ಆಫ್ಘನ್ ನಲ್ಲಿ ಹಲವು ಯೋಜನೆಗಳಿಗೆ ನೆರವು ನೀಡಿತ್ತು. ಆದರೆ ಅಮೆರಿಕ ಸೇನೆ ಹಿಂಪಡೆದ ಬೆನ್ನಲ್ಲೇ ತಾಲಿಬಾನಿಗಳು ಮತ್ತೆ ಆಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದು, ತಮ್ಮ ಸರ್ಕಾರವನ್ನು ರಚಿಸಿದ್ದಾರೆ.
MEA Joint Secretary JP Singh, who is heading a multi-member team to Afghanistan, visits the Chimtala Electricity Substation, built by Powergrid Corporation of India at Chimtala, close to Kabul. pic.twitter.com/FyvYq8PHFa
— ANI (@ANI) June 2, 2022