ಬೆಂಗಳೂರು : ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಸುಂದರಿ ಜೊತೆ ಡೇಟಿಂಗ್ ಗಾಗಿ ಕೋಟಿ ಕಳೆದುಕೊಂಡಿದ್ದು, ಬ್ಯಾಂಕ್ ಮ್ಯಾನೇಜರ್ ತನಿಖೆಯ ವೇಳೆಯ ಸ್ಪೋಟಕ ಮಾಹಿತಿ ಬಾಯ್ಬಿಟ್ಟಿದ್ಧಾನೆ.
ಬ್ಯಾಂಕ್ ಮ್ಯಾನೇಜರ್ ಡೇಂಟಿಂಗ್ ಆ್ಯಪ್ನಲ್ಲಿ ಲವ್… ಕೋಟಿ..ಕೋಟಿ ಲಾಸ್ ಮಾಡಿಕೊಂಡಿದ್ದಾನೆ. ಮ್ಯಾನೇಜರ್ ಪ್ರೇಮ ಪುರಾಣವಾಗಿದೆ. ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹರಿಶಂಕರ್ ಹರೋಹರನಾಗಿದ್ದಾನೆ. ಹರಿಶಂಕರ್ ಹನುಮಂತನಗರ ಬ್ಯಾಂಕ್ ಮ್ಯಾನೇಜರ್ ಆಗಿದ್ಧಾನೆ.
ಮೇ 13-19 ರವರೆಗೆ ಬ್ಯಾಂಕ್ ಠೇವಣಿದಾರ FD ಮೇಲೆ ಲೋನ್ ತಗೆದಿದ್ದನು. ಅನಿತಾ ಎಂಬುವವರ ಎಫ್ಡಿ ಮೇಲೆ ಸುಮಾರು 6 ಕೋಟಿ ಲೋನ್ ತೆಗೆದಿದ್ದನು. ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ, ಕ್ಲರ್ಕ್ ಮುನಿರಾಜು ಸಹಾಯ ಮಾಡಿದ್ದರು. ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿಕೊಂಡಿದ್ದಾನೆ. ಇದೇ ಹಣವನ್ನು ತನ್ನ ಜತೆ ಡೇಟಿಂಗ್ನಲ್ಲಿದ್ದ ಬ್ಯೂಟಿ ಲೇಡಿಗೆ ಸುರಿದಿದ್ದಾನೆ. ಡೇಟಿಂಗ್ ಆ್ಯಪ್ನಲ್ಲಿ ಹಣ ಕಳ್ಕೊಂಡ ಬಗ್ಗೆ ಪೊಲೀಸರಿಗೆ ಹೇಳಿದ್ಧಾನೆ. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಮ್ಯಾನೇಜರ್ ಪ್ರೇಮ ತಾಪಕ್ಕೆ ಕೋಟಿ ಕೊಟ್ಟು ಕೈಸುಟ್ಟುಕೊಂಡಿದ್ದಾನೆ. ಪೊಲೀಸರು ಪ್ರಕರಣದ ಬಗ್ಗೆ ಬಿಟಿವಿಗೆ ಮಾಹಿತಿ ನೀಡಿದ್ದಾರೆ.