ಬೆಂಗಳೂರು : ನೀವು ಬ್ಯಾಂಕ್ ನಲ್ಲಿ FD ಇಟ್ಟಿದ್ದೀರಾ ಆಗಿದ್ರೆ ಹುಷಾರಾಗಿರಿ, ನಿಮ್ಮ ಬ್ಯಾಂಕ್ನಲ್ಲಿಟ್ಟ ಹಣವನ್ನೇ ಬ್ಯಾಂಕ್ ಸಿಬ್ಬಂದಿಯವರೇ ಕೊಳ್ಳೆ ಹೊಡೀತಾರೆ. ಬೆಂಗಳೂರಿನಲ್ಲಿ ನ್ಯಾಷನಲ್ ಬ್ಯಾಂಕ್ ಒಂದರ ವಂಚನೆ ಬಟಾ ಬಯಲಾಗಿದೆ.
ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹಾಗೂ ಟೀಂ ನಿಂದ ವಂಚನೆ ನಡೆದಿದೆ. ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಠೇವಣಿದಾರರಾದ ಅನಿತಾ ಎಂಬುವರ 1.32 ಕೋಟಿ ಹಣಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಹನುಮಂತನಗರ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹರಿಶಂಕರ್ ಟೀಂ ನಿಂದ ವಂಚನೆ ನಡೆದಿದೆ. ಮ್ಯಾನೇಜರ್ ಹರಿಶಂಕರ್ ಅಷ್ಟೇ ಅಲ್ಲ ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ ಜರಾಯಿ,ಕ್ಲರ್ಕ್ ಮುನಿರಾಜುವಿನಿಂದ ಕೋಟಿ ಕೋಟಿ ವಂಚನೆ ನಡೆದಿದೆ.
ಅನಿತಾ ಎಂಬುವರು ಇಂಡಿಯನ್ ಬ್ಯಾಂಕ್ ನಲ್ಲಿ 1.32 ಕೋಟಿ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದರು. ಆ ಫಿಕ್ಸೆಡ್ ಡೆಪಾಸಿಟ್ ನ ಮೇಲೆ 75 ಲಕ್ಷ ರೂ ಲೋನ್ ಕೂಡ ಮಾಡಿದ್ದಾರೆ. ಆದ್ರೆ, ವಂಚಕ ಮ್ಯಾನೇಜರ್ ವೆಸ್ಟ್ ಬೆಂಗಾಲ್ ಭಾಗದ ಫೇಕ್ 28 ಬ್ಯಾಂಕ್ ಖಾತೆಯನ್ನ ತೆರೆದಿದ್ದ. ಆ ಫೇಕ್ ಖಾತೆಗೆ ಅನಿತಾರ ಫಿಕ್ಸೆಡ್ ಅಕೌಂಟ್ ಹೆಸರಲ್ಲಿ ಲೋನ್ ಮಾಡಿದ್ದಾರೆ. ಮ್ಯಾನೇಜರ್ ಹರಿಶಂಕರ್ ಆಂಡ್ ಗ್ಯಾಂಗ್ 6 ಕೋಟಿಯಷ್ಟು ಹಣವನ್ನ ದುರುಪಯೋಗ ಪಡಿಸಿಕೊಂಡಿದ್ದಾರೆ. ಸದ್ಯ ಇಂಡಿಯನ್ ಬ್ಯಾಂಕ್ ಜೋನಲ್ ಮ್ಯಾನೇಜರ್ ಡಿಎಸ್ ಮೂರ್ತಿ ಸದ್ಯ ಹನುಮಂತನಗರ ಠಾಣೆಗೆ ದೂರನ್ನ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಬ್ಯಾಂಕ್ ಮ್ಯಾನೇಜರ್ ಹಾಗೂ ಟೀಂಗಾಗಿ ಬಲೆಬೀಸಿದ್ದಾರೆ.
ಇದನ್ನೂ ಓದಿ : ನಮೋ ಭೇಟಿ ಬೆನ್ನಲ್ಲೇ ಇಂಗ್ಲೆಂಡ್ಗೆ ಬಿಎಸ್ವೈ..! ಕುಟುಂಬ ಸಮೇತ 5 ದಿನಗಳ ಕಾಲ ಲಂಡನ್ ಪ್ರವಾಸ ತೆರಳಿರುವ ಯಡಿಯೂರಪ್ಪ..!