ಲಂಡನ್: ಜಸ್ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ಮತ್ತು ನಾಯಕ ರೋಹಿತ್ ಶರ್ಮಾ ಗಳಿಸಿ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು.
ಇಂಗ್ಲೆಂಡ್ ತಂಡ ನೀಡಿದ್ದ 111 ರನ್ ಗುರಿಯನ್ನು ಬೆನ್ನತ್ತಿದ ಟೀಂ ಇಂಡಿಯಾ 18.4 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 114 ರನ್ ಗಳಿಸಿ ಜಯದ ನಗೆ ಬೀರಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ.
ಸುಲಭ ಗುರಿ ಬೆನ್ನತ್ತಿದೆ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 76* ರನ್ ಗಳಿಸಿದರೆ, ಶಿಖರ್ ಧವನ್ 31* ರನ್ ಗಳಿಸಿದರು.
ಇನ್ನು ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಇಂಗ್ಲೆಂಡ್ ತಂಡ 110 ರನ್ ಗೆ ಆಲೌಟ್ ಆಗಿತ್ತು.
A clinical performance from #TeamIndia to beat England by 10 wickets 👏👏
We go 1️⃣-0️⃣ up in the series 👌
Scorecard ▶️ https://t.co/8E3nGmlNOh #ENGvIND pic.twitter.com/zpdix7PmTf
— BCCI (@BCCI) July 12, 2022