ಬೆಂಗಳೂರು: ಭಾರತದ ಸ್ಟಾರ್ ಓಟಗಾರ್ತಿ ದ್ಯುತಿ ಚಂದ್ ನಿಷೇಧಿತ ಡ್ರಗ್ಸ್ ಸೇವನೆಯ ಆರೋಪದಡಿ ಆಟದಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದಾರೆ.ವಿಶ್ವ ಉದ್ದೀಪನ ಮದ್ದು ಸಂಸ್ಥೆಯು ನಡೆಸಿದ ಡೋಪ್ ಪರೀಕ್ಷೆಯಲ್ಲಿ ದ್ಯುತಿ ಚಂದ್ ಫೇಲ್ ಆಗಿದ್ದು, ಅವರ ಮೂತ್ರ ಮಾದರಿ ಪರೀಕ್ಷೆಯಲ್ಲಿ ಅವರು ಡ್ರಗ್ಸ್ ಸೇವನೆ ಮಾಡಿರುವುದು ಸ್ಪಷ್ಟವಾಗಿದ್ದು, ಅವರ ಮೇಲೆ ಕ್ರಮ ಜರುಗಿಸಲಾಗಿದೆ. ದ್ಯುತಿ ಚಂದ್ ತಾತ್ಕಾಲಿಕವಾಗಿ ಅಮಾನತು ಆಗಿರುವುದರಿಂದ ಇದು ಏಷ್ಯನ್ ಗೇಮ್ಸ್ ಮೇಲೂ ಪರಿಣಾಮ ಬೀರಲಿದೆ.
ಈ ಬಗ್ಗೆ ದ್ಯುತಿ ಚಂದ್ ಅವರಿಗೆ ಎಎಎಫ್ ಪತ್ರ ಬರೆದಿದ್ದು, ಅದರಲ್ಲಿ ನಿಮ್ಮ ಮೂತ್ರದ ಮಾದರಿ ಪರೀಕ್ಷೆಯನ್ನು ಮಾಡಲಾಗಿದ್ದು, ವಾಡಾ ಸೂಚನೆಗಳ ಪ್ರಕಾರ ಪರೀಕ್ಷೆಯ ಫಲಿತಾಂಶ ಪಾಸಿಟಿವ್ ಆಗಿರುವುದು ಕಂಡುಬಂದಿದೆ ಎಂದು ಹೇಳಿದೆ. ದ್ಯುತಿ ಚಂದ್ ಅವರ ಮೂತ್ರದ ಮಾದರಿಯನ್ನು 5 ಡಿಸೆಂಬರ್ 2022 ರಂದು ಭುವನೇಶ್ವರದಲ್ಲಿ ತೆಗೆದುಕೊಳ್ಳಲಾಗಿತ್ತು. ಆದಾಗ್ಯೂ, ಪಿಟಿಐ ಮಾಡಿರುವ ವರದಿ ಪ್ರಕಾರ, ಈ ಬಗ್ಗೆ ಪ್ರತಿಕ್ರಿಯಿಸಿರುವ ದ್ಯುತಿ, ಫಲಿತಾಂಶ ಪಾಸಿಟಿವ್ ಬಂದಿರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. 2022 ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಡುವೆ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ದ್ಯುತಿ ಚಂದ್ ಅವರು 200 ಮೀ ಈವೆಂಟ್‌ನಲ್ಲಿ ಭಾಗವಹಿಸಿದರು. ಆದರೆ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದರು. ಬಳಿಕ 100 ಮೀ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ದ್ಯುತಿ ಚಂದ್, ಈ ಈವೆಂಟ್ನ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು ಎಂದು ಸಂದೇಶ ಕಳುಹಿಸಲಾಗಿದ್ದು, ಈ ಮೂಲಕ ಅವರಿಗೆ ಡ್ರಗ್ಸ್ ಸೇವನೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ:ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 6 ಸಾವಿರದಿಂದ 8 ಸಾವಿರ ರೂ. ಹೆಚ್ಚಳ..