ಬೆಂಗಳೂರು: ಬೆಂಗಳೂರಿನಲ್ಲಿ 2 ವರ್ಷಗಳ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿ ಗೆಲ್ಲಲು ಸೆಣಸಲಿವೆ.
5 ಪಂದ್ಯಗಳ ಟಿ20 ಸರಣಿಯಲ್ಲಿ ತಲಾ 2 ಪಂದ್ಯಗಳನ್ನು ಗೆದ್ದಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು 2-2 ರಿಂದ ಸಮಬಲ ಸಾಧಿಸಿವೆ. ಇಂದು ಗೆಲ್ಲುವ ತಂಡ ಟ್ರೋಫಿಯನ್ನು ಜಯಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜಿದ್ದಾಜಿದ್ದಿನ ಕಾಳಗ ನಡೆಯಲಿದ್ದು, ಟಿ-20 ಬಿಗ್ ಫೈಟ್ ಕಣ್ತುಂಬಿಕೊಳ್ಳೋಕೆ ಬೆಂಗಳೂರಿಗರು ಕಾತುರರಾಗಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ಸ್ಟೇಡಿಯಂ ನಲ್ಲಿ ಜಮಾಯಿಸಿದ್ಧಾರೆ.
ಇದನ್ನೂ ಓದಿ: ಟಾರೇ ಕಾಣದ ಬೆಂಗಳೂರು ರಸ್ತೆಗಳಿಗೆ ದಿಢೀರ್ ಟಾರ್ ಭಾಗ್ಯ… ಮೋದಿ ಸ್ವಾಗತಕ್ಕಾಗಿ ರಾತ್ರೋರಾತ್ರಿ ರಸ್ತೆಗಳಿಗೆ ಹೊಸ ಟಾರ್…
ಇನ್ನು ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಸಂಚಾರ ಬದಲಾವಣೆ ಮಾಡಲಾಗಿದೆ. ಪರೇಡ್ ರಸ್ತೆ, ಎಂ.ಜಿ.ರೋಡ್, ಕಸ್ತೂರ್ಬಾ ರಸ್ತೆ, ಸ್ಟೇಡಿಯಂ ರಸ್ತೆಯಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕ್ರಿಕೆಟ್ ಮ್ಯಾಚ್ಗಾಗಿ ಮಧ್ಯರಾತ್ರಿ 1 ಗಂಟೆವರೆಗೆ ಮೆಟ್ರೋ ಸಂಚಾರ ನಡೆಸಲಿದೆ. ಇನ್ನು ಚಿನ್ನಸ್ವಾಮಿ ಸ್ಟೇಡಿಯಂ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.