ಬೆಂಗಳೂರು: ಮಳೆಯ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 5 ನೇ ಟಿ20 ಪಂದ್ಯ ರದ್ದಾಗಿದ್ದು, ಸರಣಿ 2-2 ರಿಂದ ಸಮಗೊಂಡಿದೆ.
ಪಂದ್ಯದ ಆರಂಭಕ್ಕೂ ಮೊದಲೇ ಭಾರಿ ಮಳೆ ಸುರಿದಿದ್ದರಿಂದ ಪಂದ್ಯ ತಡವಾಗಿ ಆರಂಭವಾಯಿತು. ಬಳಿಕ ಬ್ಯಾಟಿಂಗ್ ಗೆ ಬಂದ ಟೀಂ ಇಂಡಿಯಾ 3.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿತ್ತು. ಈ ಹಂತದಲ್ಲಿ ಮತ್ತೆ ಮಳೆ ಸುರಿದಿದ್ದರಿಂದ ಆಟ ಸ್ಥಗಿತಗೊಂಡಿತ್ತು. ಮಳೆ ನಿಲ್ಲದ ಕಾರಣ 9.45 ಗೆ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ ಗಳು ನಿರ್ಧರಿಸಿದ್ದಾರೆ.
🚨 Update 🚨
Play has heen officially called off.
The fifth & final @Paytm #INDvSA T20I has been abandoned due to rain. #TeamIndia pic.twitter.com/tQWmfaK3SV
— BCCI (@BCCI) June 19, 2022
ದಕ್ಷಿಣ ಆಫ್ರಿಕಾ ತಂಡ ಸರಣಿಯ ಮೊದಲೆರಡು ಪಂದ್ಯಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಕಮ್ ಬ್ಯಾಕ್ ಮಾಡಿದ್ದ ಟೀಂ ಇಂಡಿಯಾ ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಇಂದು ನಿರ್ಣಾಯಕ ಪಂದ್ಯದಲ್ಲಿ ಉಭಯ ತಂಡಗಳು ಸರಣಿ ಜಯಕ್ಕಾಗಿ ಹೋರಾಡುತ್ತಿದ್ದವು.