ಬೆಂಗಳೂರು: ಭಾರತದಲ್ಲಿ ಓಮಿಕ್ರಾನ್ ಅಬ್ಬರ ಮುಂದುವರದಿದ್ದು, ನೆನ್ನೆ ಒಂದೇ ದಿನ 14 ಮಂದಿಗೆ ಕೊರೋನಾ ಹೊಸ ರೂಪಾಂತರಿ ಅಟ್ಯಾಕ್ ಮಾಡಿದೆ. ದೇಶಾದ್ಯಂತ ಓಮಿಕ್ರಾನ್ ಸೋಂಕಿತರ ಸಂಖ್ಯೆ 87 ಕ್ಕೆ ಏರಿಕೆಯಾಗಿದ್ದು, ಕರ್ನಾಟಕ, ದೆಹಲಿ, ಗುಜರಾತ್, ತೆಲಂಗಾಣದಲ್ಲಿ 14 ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 32 ಸೋಂಕು ಪತ್ತೆಯಾಗಿದ್ದು, ರಾಜಸ್ಥಾನ 17, ದೆಹಲಿಯಲ್ಲಿ 10, ಕರ್ನಾಟಕದಲ್ಲಿ 8, ಗುಜರಾತ್ನಲ್ಲಿ 5, ಕೇರಳದಲ್ಲಿ 5, ತೆಲಂಗಾಣದಲ್ಲಿ 6 ಕೇಸ್, ತಮಿಳುನಾಡು, ಆಂಧ್ರ, ಪಶ್ಚಿಮ ಬಂಗಾಳ, ಚಂಡಿಗಢದಲ್ಲಿ ತಲಾ ಒಂದು ಕೇಸ್ ಪತ್ತೆಯಾಗಿದೆ. ಓಮಿಕ್ರಾನ್ ವೈರಸ್ ಬಗ್ಗೆ ನಿರ್ಲಕ್ಷ್ಯಿಸಿದಷ್ಟು ಭಾರೀ ತೊಂದರೆಗಳು ಎದುರಾಗಲಿದ್ದು, ಕೊರೋನಾಗಿಂತಲೂ ವೇಗವಾಗಿ ರೂಪಾಂತರಿ ಹರಡುತ್ತಿದೆ. ಓಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದು ಈಗಾಗಲೇ WHO ಸಲಹೆ ನೀಡಿದೆ.