ಬೆಂಗಳೂರು : ಆರ್ಥಿಕ ದಿವಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರೋ ಶ್ರೀಲಂಕಾಗೆ ಭಾರತ 40 ಸಾವಿರ ಟನ್ ಅಕ್ಕಿ ಪೂರೈಕೆ ಮಾಡ್ತಿದೆ. ತುರ್ತಾಗಿ 40,000 ಟನ್ ಅಕ್ಕಿ ಕಳುಹಿಸಿಕೊಡಲು ಭಾರತ ಮುಂದಾಗಿದೆ.
ಅಕ್ಕಿಯ ಸಾಗಾಟ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. 2.2 ಕೋಟಿ ಜನಸಂಖ್ಯೆ ಇರುವ ದ್ವೀಪ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಇಂಧನ ಆಮದಿಗೆ ವಿದೇಶಿ ವಿನಿಮಯದ ತೀವ್ರ ಕೊರತೆ ಎದುರಾಗಿದೆ. ವಿದ್ಯುತ್ ಕೊರತೆಯಿಂದಾಗಿ ದಿನಕ್ಕೆ 13 ಗಂಟೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಗತ್ಯ ವಸ್ತುಗಳ ಆಮದಿಗೆ ಪಾವತಿ ಮಾಡಲು ಸಾಧ್ಯವಾಗದೆ ಶ್ರೀಲಂಕಾ ಜಾಗತಿಕ ನೆರವನ್ನು ಕೋರಿದೆ. ವಿದ್ಯುತ್ ಉತ್ಪಾದನೆಗಾಗಿ 6,000 ಮೆಟ್ರಿಕ್ ಟನ್ ಇಂಧನವನ್ನೂ ಭಾರತವು ಶ್ರೀಲಂಕಾಕ್ಕೆ ಕಳುಹಿಸಿಕೊಟ್ಟಿದೆ. ಭಾರತ, ಚೀನಾದಿಂದ ಶ್ರೀಲಂಕಾ ಸಾಲದ ನೆರವು ಕೇಳಿದೆ.
ಇದನ್ನೂ ಓದಿ: ಕಾರ್ಕಳದಲ್ಲಿ ಮತ್ತೆ ಗೋಕಳ್ಳತನ..! ಮಾರಕಾಸ್ತ್ರಗಳನ್ನು ತೋರಿಸಿ ರಾಜಾರೋಷವಾಗಿ ದನಕಳ್ಳತನ..!