ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಗಳು ಟೀಂ ಇಂಡಿಯಾಗೆ ಆಘಾತ ನೀಡಿದ್ದು, ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ಕೇವಲ 78 ರನ್ ಗಳಿಗೆ ಆಲೌಟಾಗಿದೆ.
Innings Break!#TeamIndia are all out for 78 in the first innings of the 3rd Test.
Scorecard – https://t.co/FChN8SV3VR #ENGvIND pic.twitter.com/HR8lhyCyyI
— BCCI (@BCCI) August 25, 2021
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಟೀಂ ಇಂಡಿಯಾ 40.4 ಓವರ್ ಗಳಲ್ಲಿ 78 ರನ್ ಗಳಿಸಿ ಆಲೌಟಾಯಿತು. ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಅಟವಾಡಿದ್ದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಇಂದು ಶೂನ್ಯಕ್ಕೆ ಔಟಾದರು. ಇವರ ಬಳಿಕ ಕ್ರೀಸ್ ಗೆ ಬಂದ ಚೇತೇಶ್ವರ್ ಪೂಜಾ 1 ರನ್ ಗಳಿಸಿ ಔಟಾದರೆ, ನಾಯಕ ವಿರಾಟ್ ಕೊಹ್ಲಿ ಕೇವಲ 7 ರನ್ ಗಳಿಸಿ ಔಟಾದರು. ಉಪನಾಯಕ ಅಜಿಂಕ್ಯ ರಹಾನೆ 18 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾಗಲು ಪ್ರಯತ್ನಿಸಿದರು. ಆದರೆ ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ. ಅಂತಿಮವಾಗಿ ರೋಹಿತ್ 19 ರನ್ ಗಳಿಸಿ ಔಟಾದರು. ಉಳಿದ ಯಾವ ಆಟಗಾರರೂ ಎರಡಂಕಿ ಮೊತ್ತ ಗಳಿಸಲಿಲ್ಲ.
India are all out ☝️
An excellent bowling performance from the hosts on day one in Leeds 👏#WTC23 | #ENGvIND | https://t.co/AZCdNvbRbc pic.twitter.com/gTOS7U1Gc6
— ICC (@ICC) August 25, 2021
ಇಂಗ್ಲೆಂಡ್ ಪರ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ 3, ಓಲೆ ರಾಬಿನ್ಸನ್ 2, ಸ್ಯಾಮ್ ಕರ್ರನ್ 2 ಮತ್ತು ಓವರ್ಟನ್ 3 ವಿಕೆಟ್ ಪಡೆದರು.