ಸಿಲಿಕಾನ್ ಸಿಟೀಲಿ ಬಿಸಿಲಿನ ಬವಣೆ ಎದ್ದು ಕಾಣ್ತಾ ಇದೆ. ತಾಪಮಾನ ಹೆಚ್ಚಾದಂತೆ ಊಟಕ್ಕಿಂತ ಹಣ್ಣುಗಳನ್ನು ತಿನ್ನೋರೆ ಹೆಚ್ಚು. ಹಾಗಿದ್ರೆ ಸಿಲಿಕಾನ್ ಸಿಟಿಯಲ್ಲಿ ಹಣ್ಣುಗಳ ಬೇಡಿಕೆ ಹೇಗಿದೆ ಬೆಲೆ ಎಷ್ಟೇಷ್ಟಿದೆ ಗೊತ್ತಾ ಇಲ್ಲಿದೆ ಓದಿ..
ಇದನ್ನೂ ಓದಿ: ದೈನಂದಿನ ರಾಶಿ ಭವಿಷ್ಯ 05/04/2021
ಹೌದು ಬೇಸಿಗೆಯಲ್ಲಿ ಧಗಧಗಿಸೋ ನೆತ್ತಿ ಮೇಲಿರೋ ಸೂರ್ಯ. ಕೆಳಗೆ ನೆಲದ ಬಿಸಿಯ ತಾಪ. ಈ ನಡುವೆ ಸುಡುವ ಗಾಳಿ ಉಶ್ ಸಾಕಪ್ಪ ಸಾಕು ಬೇಸಿಗೆ ಅನ್ನೋ ಮಾತು. ಇಂತಹ ಬಿಸಿಲಿನ ತಾಪಕ್ಕೆ ಸಿಟಿಯಲ್ಲಿ ಹಣ್ಣುಗಳನ್ನು ಸೇವಿಸೋರೆ ಹೆಚ್ಚು. ಮಧ್ಯಾಹ್ನದ ಸುಡುಬಿಸಿಲಿಗೆ ವೆರೈಟಿ ಆಹಾರಗಳ ಬದಲು ಹಣ್ಣಿನ ಸಲಾಡ್, ಜ್ಯೂಸ್ ಸೇವಿಸೋರೆ ಹೆಚ್ಚು ಹಾಗಾಗಿ ಬೇಸಿಗೆ ಬಂತಂದ್ರೆ ಹಣ್ಣುಗಳ ವ್ಯಾಪಾರವಂತೂ ಗರಿಗೆದರುತ್ತದೆ. ಜತೆಗೆ ಸುಮಾರು ನಾಲ್ಕು ತಿಂಗಳವರೆಗೆ ಬೇಡಿಕೆ ಜಾಸ್ತಿಯಿರುತ್ತದೆ.
ಇದನ್ನೂ ಓದಿ: ನೀವೇನಾದ್ರು ಕಾಲಿಗೆ ಕಪ್ಪು ದಾರವನ್ನು ಕಟ್ಟಿದ್ದೀರಾ..? ಹಾಗಾದ್ರೆ ನೀವು ಓದಲೇ ಬೇಕಾದ ಸುದ್ದಿ..!
ಇನ್ನೂ ಹಬ್ಬಗಳನ್ನು ಹೊರತು ಪಡಿಸಿದ್ರೆ ಹಣ್ಣುಗಳಿಗೆ ಬೇಡಿಕೆ ಬರುವುದು ಬೇಸಿಗೆಯಲ್ಲಿ ಮಾತ್ರ. ಹಬ್ಬದ ನಡುವೆ 2-3 ದಿನ ಮಾತ್ರ ಹಣ್ಣಿನ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಹಾಗಾಗಿ ವರ್ಷದಲ್ಲಿ ಹಣ್ಣಿನ ವ್ಯಾಪಾರಕ್ಕೆ ಸೂಕ್ತ ಕಾಲವೂ ಹೌದು ಒಂದು ವಾರದಿಂದ ಹಣ್ಣುಗಳ ದರ ಕೂಡಾ ದಿಢೀರ್ ಏರಿದೆ.
ಇದನ್ನೂ ಓದಿ: ಐಪಿಎಲ್ ಟೂರ್ನಿ ಶುರುವಾಗುವ ಮೊದಲೇ ಪ್ರೇಕ್ಷಕರಿಗೆ ಬಿಗ್ ಶಾಕ್…!
ಅದ್ರಲ್ಲೂ ಕಲ್ಲಂಗಡಿ, ದಾಳಿಂಬೆ, ಕಿತ್ತಳೆ, ಮೂಸಂಬಿ, ಸಪೋಟ ಬೇಸಿಗೆಯಲ್ಲಿ ಹೆಚ್ಚು ಖರೀದಿಯಾಗುವ ಹಣ್ಣುಗಳಿವು. ಮಾವು ಈಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದು, ವಿವಿಧ ತಳಿಗಳ ಮಾವು ಪ್ರತಿ ಕೆ.ಜಿಗೆ 60 ರಿಂದ 170 ರೂಪಾಯಿ ವರೆಗೆ ಮಾರಾಟವಾಗ್ತಿದೆ. 10 ದಿನಗಳ ಹಿಂದೆ ಕಲ್ಲಂಗಡಿ ಹಾಗೂ ಪಪ್ಪಾಯ ಸಗಟು ದರದಲ್ಲಿ ಪ್ರತಿ ಕೆ.ಜಿಗೆ 8-10 ರೂಪಾಯಿ ಇತ್ತು. ಆದ್ರೆ ಇದೀಗ ದಿಢೀರ್ ಏರಿಕೆಯಾಗಿದೆ.
ಒಟ್ಟಾರೆಯಾಗಿ ಬೇಸಿಗೆಯ ಉರಿ ಬಿಸಿಲಿಗೆ ಹಣ್ಣುಗಳ ರೇಟ್ ಏರಿಕೆಯಾಗಿದ್ದು, ಗ್ರಾಹಕರಿಗೂ ಬಿಸಿ ತಾಗಿದ್ದು ಜೇಬಿಗೆ ಬರೇ ಎಳೆದಂತಾಗಿದೆ