ದಿನದಿಂದ ದಿನಕ್ಕೆ ಖೇರಳದಲ್ಲಿ ಕೊರೋನ ಸೋಂಕು ಹೆಚ್ಚಾಗುತ್ತಿದ್ದು, ಕೇರಳದಲ್ಲಿ ಸೋಂಕು ಸ್ಪೋಟಗೊಂಡಿದ್ದು, ನಿಯಂತ್ರಣ ತಪ್ಪಿದೆ. ಕೇರಳದ ಈ ಕೊರೋನ ಅಬ್ಬರ ಇಡೀ ದೇಶಕ್ಕೆ ಆತಂಕವನ್ನ ತಂದೊಡ್ಡಿದ್ದು, ಕೇರಳ ಸರ್ಕಾರಕ್ಕೆ ಕೇಂದ್ರ ಖಡಕ್ ವಾರ್ನಿಂಗ್ ಕೊಟ್ಟಿದೆ.
ಕೇರಳದಲ್ಲಿ ಈಗಾಗಲೇ ಅತಿ ಹೆಚ್ಚು ಕೊರೋನ ಸೊಂಕು ಪತ್ತೆಯಾಗುತ್ತಿದ್ದು, ಶೇ.85 ಸೋಂಕಿತರು ತಮ್ಮ ಮನೆಗಳಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕು ಹರಡದಂತೆ ಕೇಂದ್ರ ಕೇರಳ ಸರ್ಕಾರಕ್ಕೆ ಸೂಕ್ತ ಕ್ರಮಗಳನ್ನ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ಕೇಂದ್ರ ನಿರ್ದೇಶನಗಳನ್ನು ಕೇರಳ ಸರ್ಕಾರ ಕಡೆಗಣಿಸಿದಂತೆ ಕಾಣುತ್ತಿದೆ. ಕೇರಳ ಮೈಕ್ರೋ ಕಂಟೋನ್ಮೆಂಟ್ ಜೋನ್ಗಳಿಗೆ ಒತ್ತು ನೀಡುತ್ತಿಲ್ಲ. ಹೀಗಾಗಿ ಕೇರಳದ ಈ ನಿರ್ಲಕ್ಷ್ಯದಿಂದಾಗಿ ಅಕ್ಕ-ಪಕ್ಕ ರಾಜ್ಯಗಳಿಗೂ ಈ ಕೊರೋನ ಪ್ರಭಾವ ಬೀರುತ್ತಿದೆ ಎಂದು ಕೇಂದ್ರ ಹೇಳಿದ್ದು, ಕೇರಳದಲ್ಲಿ ಒಂದು ವಾರಕ್ಕೆ ಪಾಸಿಟಿವ್ ದರ ಶೇ.14 ರಿಂದ 19ರ ವರೆಗೂ ಇದೆ ಎಂದು ಆತಂಕ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಹೀಗಾಗಿ ಈ ಕೂಡಲೇ ನಿಯಂತ್ರಣ ಅಗತ್ಯ, ತುರ್ತು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸೂಚನೆ ನೀಡಿದೆ.
ಇದನ್ನೂ ಓದಿ:#FlashNews 13 ರಿಂದ ಅಧಿವೇಶನ ಆರಂಭ… ಸೆ. 7 ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ