ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ನಿರ್ಮಾಣವಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.ಅವಿಶ್ವಾಸ ನಿರ್ಣಯಕ್ಕೂ ಮುನ್ನ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮೈತ್ರಿ ಪಕ್ಷಗಳು ತಮ್ಮ ಬೆಂಬಲವನ್ನು ವಾಪಸ್ ಪಡೆದಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಬಹುಮತ ಕಳೆದುಕೊಂಡಿದೆ.
ನಿನ್ನೆ ದೇಶ ಉದ್ದೇಶಿಸಿ ಭಾಷಣಕ್ಕೆ ಇಮ್ರಾನ್ ಸಜ್ಜಾಗಿದ್ದರು. ಆದ್ರೆ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ಅವಕಾಶ ನೀಡಿರಲಿಲ್ಲ. ಇದ್ರಿಂದ ರಾತ್ರೋರಾತ್ರಿ ದೇಶ ತೊರೆಯುವಂತೆ ಸೇನೆ ಸೂಚನೆ ಕೊಟ್ಟಂತಿದೆ. ಇನ್ನು ಪಾಕಿಸ್ತಾನದಲ್ಲಿ 2023ಕ್ಕೆ ನಡೆಯಬೇಕಿದ್ದ ಚುನಾವಣೆ ಮುಂಚಿತವಾಗಿಯೇ ನಡೆಯುವ ಲಕ್ಷಣ ಕಾಣುತ್ತಿದೆ. ಪಾಕ್ನ ಆರ್ಥಿಕ ದಿವಾಳಿಗೆ ಇಮ್ರಾನ್ ಕಾರಣ ಎಂದು ವಿಪಕ್ಷಗಳು ಅವಿಶ್ವಾಸ ನಿರ್ಣಯ ಕೈಗೊಂಡಿವೆ. ಇದಕ್ಕೆ ಮೈತ್ರಿ ಕೂಡಾ ಸಾಥ್ ನೀಡಿದೆ.