ಬೆಂಗಳೂರು: ಕೈಲಾಸ ದೇಶದ ಸಂಸ್ಥಾಪಕ ನಿತ್ಯಾನಂದ ಸ್ವಾಮೀಜಿ ಮತ್ತೆ ಸುದ್ದಿಯಾಗಿದ್ದು, ನಾನು ಸತ್ತಿಲ್ಲ.. ಇನ್ನೂ ಜೀವಂತವಾಗಿ ಹಾಗೂ ಆರೋಗ್ಯವಾಗಿದ್ದೇನೆ ಎಂದು ಹೇಳುವುದ ಮೂಲಕ ನಿತ್ಯಾನಂದ ಅವರು ಸತ್ತು ಹೋಗಿದ್ದಾರೆ ಎಂಬ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ಬಗ್ಗೆ ತಮ್ಮ ಕೈಲಾಸ ಪೀಠದ ಹೆಸರಿನ ಫೇಸ್ಬುಕ್ ಪೇಜ್ನಲ್ಲಿ ಸ್ಪಷನೆ ನೀಡಿರುವ ಕೈಲಾಸ ದೇಶದ ಸಂಸ್ಥಾಪಕ , ಬಿಡದಿ ದ್ಯಾನ ಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ, ನಾನು ಸತ್ತಿಲ್ಲ, ಇನ್ನೂ ಜೀವಂತವಾಗಿ ಹಾಗೂ ಆರೋಗ್ಯವಾಗಿದ್ದೇನೆ. ನನ್ನ ವಿರೋಧಿಗಳು ಈ ರೀತಿಯ ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ನಾನು ಎಲ್ಲಿಗೂ ಓಡಿಯೂ ಹೋಗಿಲ್ಲ. ನಾನು ನನ್ನ ಕೈಲಾಸದಲ್ಲಿ ಇದ್ದೇನೆ. ನಾನು ಸದ್ಯ ಸಮಾಧಿಯಲ್ಲಿದ್ದೇನೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.ತಾನು ಸಮಾಧಿಯಲ್ಲಿದ್ದೇನೆ 2026ಕ್ಕೆ ಲೌಖಿಕ ಜಗತ್ತಿಗೆ ಹಿಂತಿರುಗುತ್ತೇನೆ ಎಂದು ಹೇಳಿದ್ದಾರೆ.