ಬೆಂಗಳೂರು: ಯಾರೇ ಹಣ ಕೇಳಿದ್ರೂ ಒಂದು ಕ್ಷಣ ಬಿಡಲ್ಲ, ಹಿರಿಯ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಆರ್.ಡಿ.ಪಾಟೀಲ್ ವಿಡಿಯೋಗೆ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, PSI ಪ್ರಕರಣವನ್ನು ಅಮೂಲಾಗ್ರ ತನಿಖೆ ಮಾಡಿಸುತ್ತಿದ್ದೇವೆ, ಆರೋಪಿ ನೀಡುವ ಹೇಳಿಕೆ ಎಷ್ಟು ನಿಜವೋ ಗೊತ್ತಿಲ್ಲ, ವಿಡಿಯೋ, ಆಡಿಯೋದಲ್ಲಿ ನಿಜಾಂಶ ಇದ್ರೆ ಕ್ರಮ ಕೈಗೊಳ್ತೇವೆ. ಯಾರನ್ನೂ ಬಚ್ಚಿಡುವ ಕೆಲಸ ಮಾಡುವುದಿಲ್ಲ, CID ಅಧಿಕಾರಿಯಾಗಲಿ, IPS ಅಧಿಕಾರಿಯಾಗಲಿ ಯಾರನ್ನೂ ಬಿಡಲ್ಲ, ಯಾರಿಗೂ ಕ್ಷಮೆ ಇಲ್ಲದೇ ಕ್ರಮ ಕೈಗೊಳ್ಳಲು ಸೂಚಿಸುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಯಶವಂತಪುರ ಬಳಿ ಭೀಕರ ರಸ್ತೆ ಅಪಘಾತ… ಮಹಿಳೆ ತಲೆಯ ಮೇಲೆ ಹರಿದ ಖಾಸಗಿ ಬಸ್…