ಮೈಸೂರು: ಪಿಂಪ್ ರವಿಗೆ ಸಂಬಂಧಿಸಿದ ಸ್ಪೋಟಕ ಸುದ್ದಿ ಇದಾಗಿದ್ದು, ಸ್ಯಾಂಟ್ರೋ ರವಿಗೆ ಆ ಟೆಸ್ಟ್ ಮಾಡಿಸ್ತಾರಾ ಪೊಲೀಸರು..? ಆ ಟೆಸ್ಟ್ ಮಾಡಿದ್ರೆ ಪಿಂಪ್ ಡಿಲಿಂಗ್ ರಿವೀಲ್ ಆಗುತ್ತಾ..? ಎಂಬ ಅನುಮಾನ ಶುರುವಾಗಿದೆ. ಹಾಗಾದ್ರೆ ಯಾವುದು ಆ ಟೆಸ್ಟ್ ಅಂತೀರಾ ಈ ಸ್ಟೋರಿ ಓದಿ.
ಸ್ಯಾಂಟ್ರೋ ಡಿಲಿಂಗ್ ರಹಸ್ಯ ತೆಗೆಯಲು CID ರೆಡಿಯಾಗಿದ್ದು, ಸ್ಯಾಂಟ್ರೋ ರವಿಗೆ ಮಂಪರು ಪರೀಕ್ಷೆ ನಡೆಸುತ್ತಾ CID? ಎಂಬ ಅನುಮಾನ ಶುರುವಾಗಿದೆ. ಪಿಂಪ್ ರವಿಗೆ ನಾರ್ಕೋ ಟೆಸ್ಟ್ ಮಾಡಲು ಸಿಐಡಿ ತಯಾರಿ ನಡೆಸುತ್ತಿದ್ದು, ಶೀಘ್ರವೇ ನಾರ್ಕೋ ಟೆಸ್ಟ್ಗೆ CID ಕೋರ್ಟ್ ಅನುಮತಿ ಕೇಳಲಿದೆ. ನಾರ್ಕೋ ಟೆಸ್ಟ್ ನಡೆದ್ರೆ ಎಲ್ಲಾ ಹಸಿಹಸಿ ಸತ್ಯ ಬಯಲಾಗಲಿದೆ. ತನ್ನ ಜತೆ ಸಂಪರ್ಕದಲ್ಲಿದ್ದವರ ಹೆಸರು ಹೇಳೋ ಸಾಧ್ಯತೆಗಳಿದ್ದು, ಈ ಟೆಸ್ಟ್ನಿಂದ ಡಿಲಿಂಗ್ ಮಾಡಿದವರ ವಿಚಾರ ಲೀಕ್ ಆಗಲಿದೆ. ಸ್ಯಾಂಟ್ರೋ ರವಿಮಂಪರು ಪರೀಕ್ಷೆಯಲ್ಲಿ ಎಲ್ಲಾ ಮಾಹಿತಿ ಕಕ್ಕಲಿದ್ದು, ಕೋರ್ಟ್ ಅನುಮತಿ ಕೊಟ್ಟರೆ CIDಯಿಂದ ಮಂಪರು ಟೆಸ್ಟ್ ಮಾಡಲಾಗುತ್ತದೆ.
ಈ ಹಿನ್ನೆಲೆ ನಾರ್ಕೋ ಟೆಸ್ಟ್ ಸುದ್ದಿ ಕೇಳಿ ರಾಜಕಾರಣಿಗಳು ಬೆಚ್ಚಿಬಿದ್ದಿದ್ದು, ರಾಜಕಾರಣಿಗಳು,ಅಧಿಕಾರಿಗಳಿಗೆ ನಡುಕ ಶುರುವಾಗಿದೆ. ರವಿ ಸೇವೆ ಪಡೆದ ಮಂತ್ರಿಗಳು, MLAಗಳ ಎದೆಯಲ್ಲಿ ಢವಢವ ಶುರುವಾಗಿದ್ದು, ಕಳೆದ 2 ದಿನಗಳಿಂದ ರವಿ ಸಿಐಡಿ ಕಸ್ಟಡಿಯಲ್ಲಿದ್ದಾನೆ. 50 ಲಕ್ಷದಿಂದ 1 ಕೋಟಿವರೆಗೂ ಹಣ ಪಡೆದು ಟ್ರಾನ್ಸ್ಫರ್ ದಂಧೆ, ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಜೊತೆ ರವಿ ಡಿಲಿಂಗ್ ನಡೆಸಿದ್ದು, ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲೂ ಸ್ಯಾಂಟ್ರೋ ರವಿ ಎತ್ತಿದ ಕೈ.
ರಾಜಕಾರಣಿ, ಅಧಿಕಾರಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡಿದ್ದ ರವಿ, ಪಿಂಪ್, ಟ್ರಾನ್ಸ್ಫರ್ ದಂಧೆಯಲ್ಲಿ ನೂರಾರು ಕೋಟಿ ಹಣ ಮಾಡಿದ್ದಾನೆ. ಮಂಪರು ಟೆಸ್ಟ್ನಲ್ಲಿ ಪಿಂಪ್ ರವಿ ಡಿಲಿಂಗ್ ರಹಸ್ಯ ಬಯಲಾಗೋದು ಪಕ್ಕಾ ಹೀಗಾಗಿ ಸ್ಯಾಂಟ್ರೋ ರವಿ ಜೊತೆ ಟಚ್ನಲ್ಲಿದ್ದವರಿಗೆ ನಡುಕ ಶುರುವಾಗಿದೆ.
ಇದನ್ನೂ ಓದಿ:ಕಲಬುರಗಿಯ ಮಳಖೇಡದಲ್ಲಿ ಬಂಜಾರ ಭಾಷೆಯಲ್ಲಿ ಭಾಷಣ.. ಬಸವಣ್ಣ, ಗುರುದತ್ತರನ್ನ ಸ್ಮರಿಸಿದ ನಮೋ…!