ಬೆಂಗಳೂರು: ಕಾಂಗ್ರೆಸ್ ನ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪಕ್ಷಕ್ಕೆ ಬಂದ್ರೆ ಸ್ವಾಗತ. ಅವರಿಗೆ ದೇವೇಗೌಡರ ಬಗ್ಗೆ, JDS ಬಗ್ಗೆ ಪ್ರೀತಿ ಇದೆ. ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ, ಇಬ್ರಾಹಿಂ ಬಂದ್ರೆ ಗೌರವದ ಸ್ಥಾನ ಮಾನ ಕೊಡ್ತೇವೆ ಎಂದು ಕುಮಾರಸ್ವಾಮಿ ಅವರು ಇಬ್ರಾಹಿಂ ಓಪನ್ ಆಹ್ವಾನ ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಇಬ್ರಾಹಿಂ ಅವರು ರಾಜಕೀಯದಲ್ಲಿ ಹಿರಿಯ ನಾಯಕರಾಗಿದ್ದಾರೆ. ದೇವೇಗೌಡರ ಏಳು-ಬೀಳಿನಲ್ಲಿ ಜೊತೆಯಾಗಿ ನಿಂತಿದ್ದರು, ವಿರೋಧ ಪಕ್ಷದ ನಾಯಕ ಸ್ಥಾನ ಸಿಗೋದಿದ್ದರೆ ಅಲ್ಲೇ ಇರಿ, ಉಪಯೋಗ ಮಾಡಿಕೊಳ್ಳಿ ಅಂತ ನಾನೇ ಹೇಳಿದ್ದೆ. ಜನತಾ ಪರಿವಾರದ ನಾಯಕರು ಎಲ್ಲರೂ ಸೆಟ್ಲ್ ಆಗಿದ್ದಾರೆ, ನಾನು ಇಬ್ರಾಹಿಂ ಅವರಿಗೂ ಕರೆ ಮಾಡಿ ಮಾತನಾಡಿದ್ದೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.
ಇದನ್ನೂ ಓದಿ: ಸೋಮವಾರದಿಂದ ರಾಜ್ಯದಲ್ಲಿ ಶಾಲೆಗಳು ಓಪನ್… 1-9 ನೇ ತರಗತಿ ಶಾಲೆಗಳು ಆರಂಭ: ಬಿ.ಸಿ. ನಾಗೇಶ್…