ಇಡೀ ವಿಶ್ವವೇ ಕೊವಿಡ್ ಸೋಂಕಿಗೆ ಲಸಿಕೆ ಪಡೆಯಬೇಕು ಎನ್ನುವ ತರಾತುರಿಯಲ್ಲಿ ಪ್ರಯತ್ನ ನಡೆಸುತ್ತಿದ್ದರೆ, ಭಾರತದ ರಾಜಕಾರಣಿಯೊಬ್ಬರು ತನಗೆ ಲಸಿಕೆ ಮೇಲೆ ನಂಬಿಕೆ ಇಲ್ಲ ನಾನು ಆ ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ. ಹಾಗಾದ್ರೆ ಆ ಹೇಳಿಕೆ ನೀಡಿರುವ ರಾಜಕಾರಣಿ ಯಾರು ಈ ಸ್ಟೋರಿ ನೋಡಿ..!
ಇಂದಿನಿಂದ ದೇಶದಾದ್ಯಂತ ಹಲವು ರಾಜ್ಯಗಳಲ್ಲಿ ಕೊರೋನಾ ವ್ಯಾಕ್ಸಿನ್ ಡ್ರೈ ರನ್ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರ ಮೊದಲ ಹಂತವೆಂಬಂತೆ ಆರೋಗ್ಯ ಸಿಬ್ಬಂದಿ, ಕೊರೋನಾ ವಾರಿಯರ್ಸ್ಗಳಿಗೆ ಕೊರೋನಾ ಲಸಿಕೆ ನೀಡದಲು ಸರ್ಕಾರ ತೀರ್ಮಾನ ನಡೆಸಿರುವ ಬೆನ್ನಲ್ಲೇ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಈ ಲಸಿಕೆ ನಾನು ತೆಗೆದುಕೊಳ್ಳುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾರೆ.
ನಾನು ಬಿಜೆಪಿ ಲಸಿಕೆಯನ್ನು ಪಡೆಯಲ್ಲ, ಈ ಕೊವಿಡ್ ಲಸಿಕೆ ಬಿಜೆಪಿ ಲಸಿಕೆ ಅದನ್ನು ನಾನು ಪಡೆಯುವುದು ಹೇಗೆ..? ನಮ್ಮ ಸರ್ಕಾರ ಬಂದಾಗ ಮಾತ್ರ ನಾನು ಲಸಿಕೆಯನ್ನು ಪಡೆಯುತ್ತೇವೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಈ ಬಿಜೆಪಿ ಲಸಿಕೆಯನ್ನು ನನಗೆ ನಂಬಲು ಆಗಲ್ಲ. ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.
ಅಖಿಲೇಶ್ ಯಾದವ್ ಅವರ ಈ ಹೇಳಿಕೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಖಿಲೇಶ್ ಯಾದವ್ ಅವರು ನೀಡಿರುವ ಈ ಹೇಳಿಕೆಯಿಂದ ವೈದ್ಯರು, ವಿಜ್ಞಾನಿಗಳಿಗೆ ಅಪಮಾನ ಮಾಡಿದ್ದಾರೆ. ಈ ಕೂಡಲೇ ಅಖಿಲೇಶ್ ಯಾದವ್ ಕ್ಷಮೆ ಕೋರಬೇಕು ಎಂದು ವ್ಯಾಪಕ ಒತ್ತಾಯ ಕೇಳಿಬಂದಿದೆ. ಒಟ್ಟಿನಲ್ಲಿ ಲಸಿಕೆಯಲ್ಲೂ ರಾಜಕೀಯ ಹುಡುಕುತ್ತಿರುವುದು ವಿಪರ್ಯಾಸವೇ ಸರಿ.