ಬೆಂಗಳೂರು : ಫ್ಲೈಓವರ್ ಮೇಲೆ ಹಣದ ಹೊಳೆ ಹರಿಸಿದ ಅರುಣ್ ಅರೆಸ್ಟ್ ಆಗಿದ್ದಾನೆ. ಅರುಣ್ ಪ್ರಚಾರದ ಗೀಳಿಗಾಗಿ ದುಡ್ಡು ಎಸೆದಿದ್ದ.
ಅರುಣ್ ಪೊಲೀಸರ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಫೇಸ್ಬುಕ್, ಇನ್ಸ್ಟಾದಲ್ಲಿ ಅರುಣ್ಗೆ ಸಾವಿರಾರು ಜನ ಫಾಲೋವರ್ಸ್ ಇದ್ದು, ಇನ್ನೂ ಹೆಚ್ಚಿನ ಫಾಲೋವರ್ಸ್ಗಾಗಿ ಹಣ ಎಸೆದಿದ್ದಾನೆ. ಈ ರೀತಿ ಮಾಡಿದ್ರೆ ವಿಡಿಯೋ ವೈರಲ್ ಆಗುತ್ತೆ, ಇದರಿಂದ ಪ್ರಚಾರ ಸಿಗುತ್ತದೆ ಎಂದು ಹೇಳಿದ್ದಾನೆ. ಹೀಗಾಗಿ, ಹಣ ಎಸೆದಿರೋದಾಗಿ ವಿಚಾರಣೆಯಲ್ಲಿ ಅರುಣ್ ಹೇಳಿಕೆ ನೀಡಿದ್ದಾನೆ. ಪೊಲೀಸರು ಚಾಮರಾಜಪೇಟೆ ಠಾಣೆಯಿಂದ ಅರುಣ್ನನ್ನ ಕರೆದೊಯ್ದಿದ್ದು, ಕೆ.ಆರ್ ಮಾರ್ಕೆಟ್ ಠಾಣೆಗೆ ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಇದನ್ನೂ ಓದಿ : ಮಂಡ್ಯದಲ್ಲಿ ವೈಯಕ್ತಿಕ ವಿಚಾರಕ್ಕೆ ಜಗಳ.. ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಹಲ್ಲೆ..!