ಬೆಂಗಳೂರು : ಸಿದ್ದರಾಮಯ್ಯ ಹೇಳಿಕೆಗೆ ಹೆಚ್ ಡಿಕೆ ಟಾಂಗ್ ನೀಡಿ, ಮುಂಬರುವ ಎಲೆಕ್ಷನ್ ನಲ್ಲಿ 20ಸೀಟು ಹೆಚ್ಚು, ಗೆದ್ದಿತನ ಬಾಲ ಹಿಡಿಯೋರು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ಗೆದ್ದಿತ್ತಿನ ಬಾಲ ನಾವು ಹಿಡಿದುಕೊಂಡು ಹೋಗಿರಲಿಲ್ಲ, ಬಿಜೆಪಿ ಬಿ ಟೀಂ ಅಂತಹೇಳಿದ ಕಾಂಗ್ರೆಸ್ ನವರೇ ಬಿಜೆಪಿ ಬಿ ಟೀಂ ಬಳಿ ಬಂದ್ರು. ನಾವು ಅರ್ಜಿ ಹಿಡಿದುಕೊಂಡು ಹೋಗಿದ್ವಾ ಅವರ ಮನೆಗೆ!? ನಾನೇ ಸಿಎಂ ಮಾಡಿ ಅಂತ ಅರ್ಜಿ ಹಾಕಿರಲಿಲ್ಲ. ಗುಲಾಂ ನಬಿ ಆಜಾದ್, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ,ಡಿಕೆ ಶಿವಕುಮಾರ್ ಬದುಕಿದ್ದಾರೆ. ಅಶೋಕ್ ಹೊಟೇಲ್ ನಲ್ಲಿ ದೇವೇಗೌಡರು ಏನು ಹೇಳಿದ್ರು, ನನ್ನ ಮಗನ ಆರೋಗ್ಯ ಅಷ್ಟು ಸರಿ ಇರಲಿಲ್ಲ.
ನೀವೆ ಯಾರಾದರೂ ಸಿಎಂ ಆಗಿ ಅಂತ ದೇವೇಗೌಡರು ಹೇಳಿರಲಿಲ್ವಾ..!? ಗುಲಾಂ ನಬಿ ಆಜಾದ್, ಗೆಹ್ಲೋಟ್ ಹೈಕಮಾಂಡ್ ತೀರ್ಮಾನ ಮಾಡಿದೆ ನೀವೇ ಆಗಿ ಅಂದ್ರು. ಬಲವಂತವಾಗಿ ಕಟ್ಟಿದ್ದು ನೀವೂ, ಬಲವಂತವಾಗಿ ಸಿಎಂ ಮಾಡಿದ್ರು. ಮೈತ್ರಿ ಸರ್ಕಾರ ತೆಗೆದವರು ನೀವೆ, ನಿಮ್ಮ ಹೈಕಮಾಂಡ್ ಗೆ ದೂಷಣೆ ಕೊಡಲ್ಲ. ನೀವು ಅದನ್ನು ಹೇಳಿಕೊಳ್ಳದೇ ಬೇರೇ ಏನೇನೋ ಹೇಳಿಕೊಳ್ಳುತ್ತಾರೆ, ಈಗ ಅದು ಮುಗಿದು ಹೋಡಿರುವ ಅಧ್ಯಾಯ. ಈಗ ಜೆಡಿಎಸ್ ಗೆ 20ಸೀಟು ಬರಲ್ಲ ಅಂತ ಹೇಳ್ತಿರಲ್ಲಾ!? 20ರ ಸೀಟು ಮುಂದೆ 1ನಂಬರ್ ಸೇರಿಸಿ 120 ಸ್ಥಾನ ರಾಜ್ಯದ ಜನ ತರುತ್ತಾರೆ. 20ಸೀಟು ಬರುತ್ತೆ ಅಂತ ಹೇಳೋರು ನೀವ್ಯಾರು, ರಾಜ್ಯದ ಜನ ಅದನ್ನು ತೀರ್ಮಾನ ಮಾಡ್ತಾರೆ ಎಂದು ಹೇಳಿದ್ದಾರೆ.