ಬೆಂಗಳೂರು : ಬೆಳ್ಳಂದೂರು ಪೊಲೀಸರಿಗೆ ಪಾಕ್ ಮಹಿಳೆ ಪ್ರಕರಣ ತಲೆನೋವಾಗಿದ್ದು, ನಾನು ಪಾಕಿಸ್ತಾನಕ್ಕೆ ಹೋಗಲ್ಲ, ಇಲ್ಲೇ ಇರ್ತೀನಿ ಎಂದು ಪಾಕ್ ಮೂಲದ ಮಹಿಳೆ ರಚ್ಚೆ ಹಿಡಿದು ಕುಳಿತಿದ್ದಾಳೆ.
ಮಹಿಳೆ ಗಡಿ ನುಸುಳಿ ಬಂದು ಯುಪಿ ವ್ಯಕ್ತಿ ಮದುವೆಯಾಗಿದ್ದಳು. ಪಾಕ್ ಮಹಿಳೆ ಇಕ್ರಾ ತವರಿಗೆ ಹೋಗಲ್ಲ ಎನ್ನುತ್ತಿದ್ದಾಳೆ.
ಪಾಕಿಸ್ತಾನದ ಮಹಿಳೆFRRO ಅಧೀನದಲ್ಲಿದ್ದಾರೆ. ಮಹಿಳೆ ಮುಲಾಯಂ ಬಿಟ್ಟು ಹೋಗಲ್ಲ ಎನ್ನುತ್ತಿದ್ದು, ಪೊಲೀಸರಿಗೆ ತಲೆ ನೋವಾಗಿರುವ ಪಾಕ್ ಮಹಿಳೆ ಹಠ ಇಡಿದಿದ್ದಾಳೆ. FRRO ಡಿಪೋರ್ಟ್( ಹಸ್ತಾಂತರ) ಮಾಡಲು ತಯಾರಿ ಮಾಡುತ್ತಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶ ಮಾಡಿರುವ ಹಿನ್ನೆಲೆಯಲ್ಲಿ ಹಸ್ತಾಂತರ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಏಜೆನ್ಸಿ ವಿದೇಶಿಗರ ನಿರಾಶ್ರಿತರ ಕೇಂದ್ರ ಸಂಪರ್ಕಿಸಿದೆ. ಪಾಕ್ ಮಹಿಳೆ ವಾಪಸ್ ಕಳಿಸಲು ಇನ್ನೂ ಎರಡು ತಿಂಗಳು ಪ್ರಕ್ರಿಯೆ ನಡೆಯಲಿದೆ. ಪೊಲೀಸ್ ಅಧಿಕಾರಿಗಳು ಕಾನೂನು ಪ್ರಕ್ರಿಯೆ ಪರಿಶೀಲನೆ ಮಾಡುತ್ತಿದ್ದಾರೆ. ಮದುವೆ ಆಗಿರುವ ಬಗ್ಗೆ ಅಧಿಕೃತ ದಾಖಲೆ, ಫೋಟೋಗಳಿಲ್ಲ, ಮ್ಯಾರೇಜ್ ಸರ್ಟಿಫಿಕೇಟ್ ಇಲ್ಲದ ಕಾರಣ ಮದುವೆ ಒಪ್ಪಲು ಸಾಧ್ಯವಿಲ್ಲ. ವಿದೇಶಿ ಮಹಿಳೆ ಮದ್ವೆಯಾದರೆ ದಾಖಲೆ ಇರಲೇಬೇಕು. ಪೊಲೀಸರು ಹೀಗಾಗಿ ಇಬ್ಬರನ್ನೂ ವಿಚಾರಣೆ ಮಾಡಿದ್ದಾರೆ.
ಇದನ್ನೂ ಓದಿ : ಸಾರಿಗೆ ಇಲಾಖೆಯಿಂದ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ..! ಬೆಂಗಳೂರಿಗೆ ಹೊಸ ಬಸ್.. ಬೆಳಗಾವಿ, ಹುಬ್ಬಳ್ಳಿಗೆ ಗುಜರಿ ಬಸ್..!