ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಕ್ಷಸ ಪತಿಯೊಬ್ಬ ತನ್ನ 3 ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ.
2 ವರ್ಷ 5 ತಿಂಗಳ ಮಗುವಿಗೂ ಕಚ್ಚಿ ವಿಕೃತಿ ಮೆರೆದಿದ್ದು, 23 ವರ್ಷದ ಪತ್ನಿಗೆ ವಿಕ್ಟೋರಿಯಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 37 ವರ್ಷದ ಬಾಬು ಪತ್ನಿ ಕೊಲೆಗೆ ಯತ್ನಿಸಿದ್ದಾನೆ. ಎರಡನೇ ಮದುವೆಯಾಗಿದ್ದ ಬೈಯಪ್ಪನಹಳ್ಳಿಯ ಬಾಬು, ಪತ್ನಿ ಕೂಲಿ ಮಾಡಿ ಕೂಡಿಟ್ಟ ಹಣದಲ್ಲಿ ಮಜಾ ಮಾಡುತ್ತಿದ್ದ. ಕುಡಿತದ ವ್ಯಸನದಿಂದ ದಿನವೂ ಹಿಂಸೆ ನೀಡುತ್ತಿದ್ದ,
ದುಡ್ಡಿನ ವಿಚಾರಕ್ಕೆ ಜಗಳ ನಡೆದು ಪತ್ನಿಗೆ ಬೆಂಕಿ ಹಚ್ಚಲು ಬಾಬು ಮುಂದಾಗಿದ್ದು, ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಬುನನ್ನು ಬಂಧಿಸಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಉಕ್ರೇನ್ನ ಸುಮಿಯಿಂದ ಮತ್ತೆ 600 ಮಂದಿ ಭಾರತೀಯ ವಿದ್ಯಾರ್ಥಿಗಳ ಟೀಂ ತವರಿಗೆ ವಾಪಸ್ ..!