ವಿಜಯಪುರ: ಅನೈತಿಕ ಸಂಬಂಧಕ್ಕಾಗಿ ಗಂಡನ ಹತ್ಯೆಗೈದ ಹೆಂಡತಿ ಸೇರಿದಂತೆ ಇಬ್ಬರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ವರಿ ಹಳ್ಳಿ, ರವಿ ತಳವಾರ, ಗುರಪ್ಪ ದಳವಾಯಿ ಬಂಧಿತ ಆರೋಪಿಗಳು. ಇನ್ನು ಪ್ರಕಾಶ ಹಳ್ಳಿಯನ್ನು ಹೆಂಡತಿ ರಾಜೇಶ್ವರಿ, ಸಹಚರರು ಸೇರಿಕೊಂಡು ಹತ್ಯೆಗೈದಿದ್ದರು. ಆರೋಪಿಗಳ ವಿಚಾರಣೆ ವೇಳೆಯಲ್ಲಿ ಮಾಹಿತಿ ಸಿಕ್ಕಿದೆ. ಕೊಲೆಗಾರ ವಿರುದ್ಧ 302 ಕೇಸ್ ದಾಖಲಿಸಲಾಗಿದೆ.