ಬೆಂಗಳೂರು: ಹೆಂಡ್ತಿ ಕಾಟಕ್ಕೆ ಬೇಸತ್ತು 7 ವರ್ಷಗಳ ಹಿಂದೆ ಬೆಂಗಳೂರು ಬಿಟ್ಟಿದ್ದ ವ್ಯಕ್ತಿಯೊಬ್ಬರು ಮತ್ತೆ ಸಿಕ್ಕಿದ್ದಾರೆ. ಸಂಸಾರ ಕೋಟೆ ದಾಟ್ಟಿದ್ದ ಕೋಟೆಪ್ಪ ವಾಪಸ್ ಸಿಕ್ಕಿದ್ದೇ ರೋಚಕವಾಗಿದೆ. ಅರೇ ಅದೇನು ಅಂತೀರಾ ಈ ಸ್ಟೋರಿ ಓದಿ..
7 ವರ್ಷದ ನಂತರ ಪತಿರಾಯ ಪತ್ತೆಯಾಗಿದ್ದು, 2015ರಲ್ಲಿ ಬೆಂಗಳೂರೂ ಬೇಡ-ಹೆಂಡ್ತಿನೂ ಬೇಡ ಅಂತಾ ಊರು ಬಿಟ್ಟು ಹೋಗಿದ್ದ 2012ರಲ್ಲಿ ಪ್ರೀತಿಸಿ ಮದುವೆಯಾಗಿ 3 ವರ್ಷ ಹೆಂಡ್ತಿ ಜೊತೆಗಿದ್ದ ಕೋಟೆಪ್ಪ,ಮದ್ವೆ ನಂತರ ಹೆಂಡತಿ ಕಿರಿಕ್ ಕೊಡ್ತಿದ್ದಾಳೆ ಅಂತಾ ಮನೆಯನ್ನೇ ಬಿಟ್ಟು ಹೋಗಿದ್ದ.
ಬನ್ನೇರುಘಟ್ಟ ರಸ್ತೆಯ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೋಟೆಪ್ಪ ಕೆಲಸ ಮಾಡುತ್ತಿದ್ದ. ಕೈತುಂಬ ಸಂಬಳ ಸಿಕ್ಕಿದ್ರೂ ಮನೆಯಲ್ಲಿ ಹೆಂಡತಿ ಕಾಟ ಎಂಬ ಕಾರಣಕ್ಕೆ ಬೆಂಗಳೂರು ಬಿಟ್ಟು ಕೋಟೆಪ್ಪ ಒಡಿಶಾ ಸೇರಿಕೊಂಡಿದ್ದ. ಸದ್ಯ ಹರಿಹರದಲ್ಲಿದ್ದ ತನ್ನ ತಂದೆ ಆರೋಗ್ಯ ಕೆಟ್ಟ ಸುದ್ದಿ ಕೇಳಿ ವಾಪಸ್ ಬಂದಿದ್ದ.
ಕಳೆದ ಒಂದು ವಾರದ ಹಿಂದೆ ಖಾಸಗಿ ಬ್ಯಾಂಕ್ನಲ್ಲಿ 10,000 FD ಮಾಡಿದ್ದ. ಮಡದಿ ಮೊಬೈಲ್ಗೆ ಗಂಡ FD ಮಾಡಿದ್ದ ಮೆಸೇಜ್ ಬಂದಿತ್ತು. ಕೂಡಲೇ ಪತ್ನಿ ಆಡುಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಕೋಟೆಪ್ಪನನ್ನು ಹುಡುಕಿ ಮಡದಿ ಮನೆ ಸೇರಿಸಿದ್ದಾರೆ.