ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹ್ಯಾಟ್ರಿಕ್ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆಯಾದರೂ, ಏದುಸಿರು ಬಿಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೈ, ಪಟ ಮತ್ತು ಪಕ್ಷೇತರ ಅಭ್ಯರ್ಥಿಗಳು ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸುವಲ್ಲಿ ಯಶಸ್ವಿಯಾಗಿದೆ.
82 ಕ್ಷೇತ್ರಗಳಿಗೆ ನಡೆದ ಚುನಾವಣೆ
ಬಿಜೆಪಿ-39
ಕಾಂಗ್ರೆಸ್-33
ಎಐಎಂಐಎಂ-03
ಪಕ್ಷೇತರ-06 ಗೆಲುವು
ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯಲು 42 ಸೀಟುಗಳು ಅವಶ್ಯಕವಿದೆ. ಆದರೆ, ಮೇಯರ್ ಚುನಾವಣೆಯಲ್ಲಿ 1 ಸಂಸದ, ಮೂವರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಬಿಜೆಪಿಯವರೇ ಇರುವುದರಿಂದ ಮಹಾನಗರ ಪಾಲಿಕೆ ಗದ್ದುಗೆ ಸರಳವಾಗಿ ಬಿಜೆಪಿಗೆ ದಕ್ಕಲಿದೆ.
ಕ್ಷೇತ್ರವಾರು ವಾರ್ಡ್ ಗಳ ಗೆಲುವು..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಶಾಸಕರ ಕ್ಷೇತ್ರವಾರು ವಾರ್ಡಗಳು..
1) ಧಾರವಾಡ ಗ್ರಾಮೀಣ ಕ್ಷೇತ್ರ – ಬಿಜೆಪಿ ಶಾಸಕ ಅಮೃತ ದೇಸಾಯಿ
ಒಟ್ಟು ವಾರ್ಡ್ ಗಳು -9
ಬಿಜೆಪಿ-05
ಕಾಂಗ್ರೆಸ್-04
2) ಹು-ಧಾ ಪಶ್ಚಿಮ – ಅರವಿಂದ್ ಬೆಲ್ಲದ್
ಒಟ್ಟು ವಾರ್ಡ್ ಗಳು -25
ಬಿಜೆಪಿ- 13
ಕಾಂಗ್ರೆಸ್-10
ಜೆಡಿಎಸ್-01
ಪಕ್ಷೇತರ-01
3) ಹು-ಧಾ ಸೆಂಟ್ರಲ್ – ಜಗದೀಶ್ ಶೆಟ್ಟರ್
ಒಟ್ಟು ವಾರ್ಡ್ ಗಳು – 25
ಬಿಜೆಪಿ- 14
ಕಾಂಗ್ರೆಸ್-08
ಜೆಡಿಎಸ್-00
ಪಕ್ಷೇತರ-03
4) ಹು-ಧಾ ಪೂರ್ವ – ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ
ಒಟ್ಟು ವಾರ್ಡ್ ಗಳು – 23
ಬಿಜೆಪಿ- 07
ಕಾಂಗ್ರೆಸ್-11
AIMIM-03
ಜೆಡಿಎಸ್-00
ಪಕ್ಷೇತರ-02
ಕಳೆದ ಎರಡು ಬಾರಿ ಬಿಜೆಪಿಯೇ ಅಧಿಕಾರ ಚುಕ್ಕಾಣಿ ಹಿಡಿದಿದ್ದು, ಮತ್ತೆ ಇದೀಗ ಮೂರನೇಯ ಬಾರಿಗೆ ಅಧಿಕಾರ ಹಿಡಿಯುತ್ತಿದೆ. ಪ್ರಮುಖವಾಗಿ ಇಬ್ಬರು ಮಾಜಿ ಮೇಯರ್ ಗಳು ಚುನಾವಣೆಯಲ್ಲಿ ಸೋಲನ್ನುಂಡಿದ್ದಾರೆ. ಹೊಸ ಯುವಕರು ಗೆಲವು ಸಾಧಿಸಿದ್ದು, ಧಾರವಾಡದ 5ನೇ ವಾರ್ಡಿನ ನಿತಿನ್ ಇಂಡಿ ಕೇವಲ 28 ವಯಸ್ಸಿನ ಯುವಕನಾಗಿದ್ದು, ಪಾಲಿಕೆಯ ಅತಿ ಕಿರಿಯ ಸದಸ್ಯನಾಗಿದ್ದಾರೆ.