ಇತ್ತೀಚಿನ ಯುವಜನತೆಗೆ ತಾನು ಗಡ್ಡ ಬಿಟ್ಟು ಹ್ಯಾಂಡ್ಸಮ್ ಆಗಿ ಕಾಣಬೇಕೆಂದು ಆಸೆ ಇರುತ್ತದೆ. ಗಡ್ಡ ಬೆಳೆಸಲು ನಾನಾ ಕಸರತ್ತು ಮಾಡುತ್ತಾರೆ, ಗಡ್ಡದಲ್ಲೇ ವಿಭಿನ್ನ ಸ್ಟೈಲ್ ಮಾಡುತ್ತಾರೆ. ಆದರೆ ಅದರ ರಕ್ಷಣೆ ಕೂಡ ಹಾಗೇಯೆ ಮಾಡಬೇಕು. ಹಾಗಾದ್ರೆ ಹೇಗೆ ಅದರ ರಕ್ಷಣೆ ಮಾಡುವುದು ಅಂತ ಯೋಚನೆ ಮಾಡ್ತಾ ಇದ್ದೀರಾ..? ಸ್ಟೋರಿ ಓದಿ..!
ಗಡ್ಡವನ್ನು ಸಹ ಚೆನ್ನಾಗಿ ಬಾಚುತ್ತಿರಿ. ಗಡ್ಡ ಬಿಡಲು ಆರಂಭಿಸಿದಾಗ ತುರಿಕೆ ಆರಂಭವಾಗುತ್ತದೆ. ಆದುದರಿಂದ ಮೊದಲಿನಿಂದಲೇ ಗಡ್ಡವನ್ನು ಸ್ವಚ್ಚವಾಗಿಟ್ಟುಕೊಳ್ಳಲು ಆರಂಭಿಸಿ. ಗಡ್ಡ ಸಣ್ಣದಿರುವಾಗ ಅದನ್ನು ಕತ್ತರಿಸಲು ಹೋಗಬೇಡಿ. ಸ್ವಲ್ಪ ಉದ್ದ ಬಿಡಿ. ಎರಡು ಮೂರು ತಿಂಗಳು ಕಳೆದ ಮೇಲೆ ಅದನ್ನು ಕತ್ತರಿಸಿ. ಇದರಿಂದ ಗಡ್ಡಕ್ಕೆ ಮೆರುಗು ಬರುತ್ತದೆ. ಗಡ್ಡವನ್ನು ಸ್ವಚ್ಛಗೊಳಿಸಲು ಶ್ಯಾ೦ಪೂ ಬಳಸಿ.
ನಿಮ್ಮಕೂದಲನ್ನು ನಿಯಮಿತವಾಗಿ ತೊಳೆದು ಸ್ವಚ್ಛಗೊಳಿಸಿಕೊಳ್ಳುವ೦ತೆ, ನಿಮ್ಮ ಮುಖದ ಮೇಲಿನ ಕೂದಲನ್ನೂ ಕೂಡಾ ನಿಯಮಿತವಾಗಿ ಸ್ವಚ್ಛಗೊಳಿಸಿ. ಗಡ್ಡ ತೊಳೆಯಲು ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿ. ಇದರಿಂದ ತ್ವಚೆಯು ಶುಷ್ಕವಾಗುತ್ತದೆ. ಗಡ್ಡದ ಮೇಲೆ ಕ೦ಡೀಶನರ್ ಬಳಸಿಕೊಳ್ಳುವ ವಿಚಾರವು ಶ್ಯಾ೦ಪೂ ಬಳಸಿಕೊಳ್ಳುವಷ್ಟೇ ಮುಖ್ಯ. ಗಡ್ಡವು ಮುಖದ ಅಂದ ಹೆಚ್ಚಿಸಬೇಕೆ೦ದು ನೀವು ಬಯಸಿದ್ದಲ್ಲಿ, ಗಡ್ಡದಲ್ಲಿರುವ ಸೀಳುತುದಿಗಳುಳ್ಳ ಕೂದಲುಗಳನ್ನು ನಿವಾರಿಸುವುದು ಒಳ್ಳೆಯದು.