ಕೋಲಾರ : ಕೋಲಾರದಲ್ಲಿ ಸಿದ್ದರಾಮಯ್ಯಗೆ ಮನೆ ಫಿಕ್ಸ್ ಆಗಿದೆ. ಕಳೆದ 10 ದಿನಗಳಿಂದ ಮನೆಗಾಗಿ ಹುಡುಕಾಟ ನಡೆಯುತ್ತಿತ್ತು.
ಕೋಲಾರ ನಗರ ಹೊರವಲಯದಲ್ಲಿ ಮನೆ ರೆಡಿಯಾಗಿದ್ದು, ಕೋಗಿಲಹಳ್ಳಿ ಗ್ರಾಮದಲ್ಲಿ ಹೆದ್ದಾರಿ ಪಕ್ಕವೇ ಮನೆ ಇದೆ. ವಿಶಾಲ ಮನೆ ಸುಮಾರು ಒಂದು ಎಕರೆ ತೋಟದಲ್ಲಿದೆ. ಕುರುಬರ ಪೇಟೆ ನಿವಾಸಿ ಶಂಕರ್ ಎನ್ನುವರ ಒಡೆತನದ ಮನೆಯಾಗಿದ್ದು, 2018ರಲ್ಲಿ ನಿರ್ಮಾಣ ಮಾಡಿದ್ದ ಮನೆ ಯಾರಿಗೂ ಬಾಡಿಗೆ ನೀಡಿರಲಿಲ್ಲ. ಶಂಕರ್ ಸಿದ್ದರಾಮಯ್ಯ ಅವ್ರ ಅಭಿಮಾನಿಯಾಗಿದ್ದು, ತಿಂಗಳ ಬಾಡಿಗೆ ಲೆಕ್ಕದಲ್ಲಿ ಮನೆ ನೀಡಲು ಸಮ್ಮತಿ ನೀಡಿದ್ದಾರೆ. 1 ಎಕರೆಯಲ್ಲಿ 56 ಅಡಿ ಉದ್ದ, 46 ಅಡಿ ಅಗಲ ವಿಸ್ತೀರ್ಣದ ಮನೆಯಾಗಿದೆ. ಕೋಲಾರ ನಗರದಿಂದ 1.5 ಕಿ.ಮೀ. ದೂರದಲ್ಲಿರುವ ಕೋಗಿಲಹಳ್ಳಿಯಲ್ಲಿದೆ.