ಲುವಿವ್: ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ಗೆ ಬಾಲಿವುಡ್ ನಟಿ ಮತ್ತು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಜೋಲಿ ಅವರು ಭೇಟಿ ನೀಡಿದ್ದಾರೆ.
2011 ರಿಂದ ವಿಸ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ವಿಶೇಷ ರಾಯಭಾರಿಯಾಗಿರುವ ಏಂಜಲಿನಾ ಜೋಲಿ ಉಕ್ರೇನ್ ಪಶ್ಚಿಮ ಭಾಗದಲ್ಲಿರುವ ಲುವಿವ್ ನಗರಕ್ಕೆ ಭೇಟಿ ನೀಡಿದ್ದರು. ಅವರು ರಷ್ಯಾ ದಾಳಿಯಿಂದಾಗಿ ನಿರಾಶ್ರಿತರಾಗಿರುವವರನ್ನು ಭೇಟಿ ಮಾಡಿ ಅವರೊಂದಿಗೆ ಸ್ವಲ್ಪ ಸಮಯ ಕಳೆದರು.
Angelina Jolie visited a hospital to meet kids wounded in the Kramatorsk railway attack in Lviv, Ukraine.
April 30, 2022. pic.twitter.com/cw76dqG9Az
— best of angelina jolie (@bestofajolie) April 30, 2022
ಏಂಜಲಿನಾ ಜೋಲಿ ಅವರ ಭೇಟಿ ಅನಿರೀಕ್ಷಿತವಾಗಿತ್ತು. ಅವರ ಭೇಟಿ ನಮಗೆ ಅತೀವ ಸಂತಸ ತಂದಿದೆ ಎಂದು ಲುವಿವ್ ಪ್ರದೇಶದ ಗವರ್ನರ್ ತಿಳಿಸಿದ್ಧಾರೆ.
⚡️ Actress and filmmaker Angelina Jolie was spotted at a cafe in western Ukrainian city of Lviv on April 30.
Jolie is a special envoy for the United Nations High Commissioner for Refugees.
Video: Maya Pidhoretska via Facebook. pic.twitter.com/CBtR4HBMNR
— The Kyiv Independent (@KyivIndependent) April 30, 2022
ಏಂಜಲಿನಾ ಜೋಲಿ ಅವರು ಲುವಿವ್ ರೈಲು ನಿಲ್ದಾಣದಲ್ಲಿ ಬೀಡು ಬಿಟ್ಟಿರುವ ನಿರಾಶ್ರಿತರನ್ನು ಭೇಟಿ ಮಾಡಿದ್ದಾರೆ. ಬಳಿಕ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಆ ಬಳಿಕ ಅವರು ಉಕ್ರೇನ್ ನ ಮಕ್ಕಳೊಂದಿಗೆ ಆಟವಾಡಿದ್ದಾರೆ. ಜೊತೆಗೆ ಸ್ಥಳೀಯ ರೆಸ್ಟೋರೆಂಟ್ ಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ.
⚡️Another video of Angelina Jolie from a boarding school in Lviv. pic.twitter.com/IysFvw5ZDm
— Flash (@Flash43191300) April 30, 2022
ಇನ್ನು ಏಂಜಿಲನಾ ಜೋಲಿ ಅವರು ಲುವಿವ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಕ್ಷಿಪಣಿ ದಾಳಿಯ ಸೈರನ್ ಮೊಳಗಿದ್ದರಿಂದಾಗಿ ಅವರು ರಕ್ಷಣೆಗಾಗಿ ತಾವಿದ್ದ ಸ್ಥಳದಿಂದ ತ್ವರಿತವಾಗಿ ತೆರಳಿದ ಘಟನೆಯೂ ನಡೆದಿದೆ.
Angelina Jolie had to run for cover in Lviv today due to a missile strike threat pic.twitter.com/5Si6ouOOUG
— Ragıp Soylu (@ragipsoylu) April 30, 2022
ಏಂಜಲಿನಾ ಜೋಲಿ ಅವರು ಕಳೆದ ತಿಂಗಳು ಯೆಮನ್ ಗೆ ಭೇಟಿ ನೀಡಿ ಅಲ್ಲಿ ಯುದ್ಧದಿಂದಾಗಿ ನಿರಾಶ್ರಿತರಾಗಿರುವವರನ್ನು ಭೇಟಿ ಮಾಡಿದ್ದರು.