ಬೆಂಗಳೂರು : ಐಟಿಸಿಟಿಯಲ್ಲಿ ಹಿಟ್ ಅಂಡ್ ರನ್ಗೆ ನೈಟ್ ಕರ್ಫ್ಯೂ ಹೊತ್ತಲ್ಲೇ ಬೈಕ್ ಸವಾರ ಬಲಿಯಾಗಿದ್ದಾರೆ.
ಲಾಲ್‌ಬಾಗ್ ಪಶ್ಚಿಮ ಗೇಟ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಇನೋವಾ ಕ್ರಿಸ್ಟಾ ಕಾರು ಚಾಲಕ ಪರಾರಿಯಾಗಿದ್ದಾನೆ. 36 ವರ್ಷದ ಬೈಕ್ ಸವಾರ ಸುರೇಶ್ ನಾಯ್ಕ್ ಗೆ ಗಂಭೀರ ಗಾಯಗಳಾಗಿ, ಆಸ್ಪತ್ರೆಗೆ ಸಾಗಿಸುವ ವೇಳೆ ದುರ್ಮರಣಕ್ಕೀಡಾಗಿದ್ದಾರೆ. ಮೃತ ಸುರೇಶ್ ನಾಯ್ಕ್ ಕಾರವಾರ ಜಿಲ್ಲೆ ಶಿರಸಿ ಮೂಲದವರಾಗಿದ್ದು, ಕೋರಮಂಗಲದ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಬಸವನಗುಡಿ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಗುದ್ದೋಡಿದ ಕಾರ್ಗಾಗಿ ಪೊಲೀಸರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಕಾರ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ:#Flashnews BBMP ಮುಖ್ಯ ಆಯುಕ್ತ ಗೌರವ್ ಗುಪ್ತ ಅವರಿಗೆ ಕೊರೋನಾ ಪಾಸಿಟಿವ್…!