ಬೆಂಗಳೂರು : ಹಿಂದೂ ಸಂಘಟನೆಗಳು ಕಾಂಗ್ರೆಸ್ಗೆ ತಲೆನೋವಾಗಿದೆ. ಹಿಂದೂ ಸಂಘಟನೆಗಳು ಬಿಜೆಪಿಗಿಂತಲೂ ಕಾಂಗ್ರೆಸ್ನ ನಿದ್ದೆಗೆಡಿಸುತ್ತಿದ್ದು, ಸತೀಶ್ ಜಾರಕಿಹೊಳಿ ಕೊಟ್ಟ ಹಿಂದೂ ವ್ಯಾಖ್ಯಾನವೇ ಬಿಸಿತುಪ್ಪವಾಗಿದೆ.
ಹಿಂದೂ ಸಂಘಟನೆಗಳು ಹಿಂದೂ ಅಸ್ತ್ರ ಹಿಡಿದುಕೊಂಡು ಕಾಂಗ್ರೆಸ್ಗೆ ಠಕ್ಕರ್ ಕೊಡುತ್ತಿದೆ. ಸಂಘಟನೆಗಳು ಕಾಂಗ್ರೆಸ್ ನಾಯಕರನ್ನೇ ನೇರವಾಗಿ ಟಾರ್ಗೆಟ್ ಮಾಡ್ತಿದೆ. ಬಿಜೆಪಿ ನಾಯಕರು ಹಿಂದೂ ಪರ ಸಂಘಟನೆಗಳಿಗೆ ಬೆಂಬಲವಾಗಿ ನಿಂತಿದೆ. ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್ ಸೇರಿ ಹಲವರಿಗೆ ಬೆಂಬಲವನ್ನು ನೀಡಿದೆ. ಬಿಜೆಪಿಗರು ಎಲೆಕ್ಷನ್ ನಂತರ ಚಕ್ರವರ್ತಿ ಸೂಲಿಬೆಲೆ ನಿಂದಿಸಿದ್ದು, ಸೂಲಿಬೆಲೆ ಇದೀಗ ನಾನೂ ಹಿಂದೂ ಅಭಿಯಾನ ಶುರು ಮಾಡಿದ್ಧಾರೆ.
ಟಿಪ್ಪು ವಿಚಾರದಲ್ಲಿ ಕಾಂಗ್ರೆಸ್ ಮೇಲೆ ಮುಗಿ ಬೀಳ್ತಿದ್ದಾರೆ. ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧವೂ ಗುಡುಗುತ್ತಿದ್ದಾರೆ. ಬಿಜೆಪಿ ಅವಧಿಯಲ್ಲೂ ನಮಗೆ ಕಿರುಕುಳ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ಮುತಾಲಿಕ್ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎನ್ನುತ್ತಿದ್ದು, 60 ಹಿಂದೂ ನಾಯಕರನ್ನು ಚುನಾವಣೆಗೆ ತರ್ತೇವೆ ಎಂದಿದ್ದಾರೆ. ಇದ್ರಿಂದ ಹಿಂದೂಗಳ ವೋಟ್ ಡಿವೈಡ್ ಆಗುವ ಭೀತಿ ಉಂಟಾಗುತ್ತದೆ. ಮುತಾಲಿಕ್ ಅವರ ನಿಲುವು ಬಿಜೆಪಿ ನಾಯಕರಿನ್ನೂ ಚಿಂತೆಗೀಡಾಗಿಸಿದೆ.