ಕಲಬುರಗಿ: ಕಲಬುರಗಿಯಲ್ಲಿ ವಿದ್ಯಾರ್ಥಿನಿಯರ ಹಿಜಾಬ್ ಹಠ ಮುಂದುವರೆದಿದ್ದು, ಎರಡನೇ ದಿನವೂ ಹಿಜಾಬ್ ಸಮೇತ ವಿದ್ಯಾರ್ಥಿಗಳು ತರಗತಿಗೆ ಬಂದಿದ್ದಾರೆ. ಹಿಜಾಬ್ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್ಗೆ ಬರಲ್ಲ ಎಂದು ವಿದ್ಯಾರ್ಥಿಗಳು ಹಠ ಹಿಡಿದಿದ್ದಾರೆ.
ಕಲಬುರಗಿಯ ಕೆಲವೆಡೆ ಹಿಜಾಬ್ ಧರಿಸಿ ಸ್ಟೂಡೆಂಟ್ಸ್ ಆಗಮಿಸುತ್ತಿದ್ದು, ಮಕ್ಕಳಿಗೆ ಹಿಜಾಬ್ ಹಾಕಿಸಿ ಶಾಲೆಗೆ ಕೆಲ ಪೊಷಕರು ಕಳಿಸುತ್ತಿದ್ದಾರೆ. ನ್ಯೂ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಗೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಮಕ್ಕಳು ಆಗಮಿಸಿದ್ದಾರೆ.
ವಿದ್ಯಾರ್ಥಿಗಳು ಹಿಜಾಬ್ಗೆ ಅವಕಾಶ ಸಿಗದೇ ಇದ್ರೆ ಸ್ಕೂಲ್ಗೆ ಬರಲ್ಲ ಎಂದು ಹಠ ಹಿಡಿದಿದ್ದು, ಕಲಬುರಗಿ ನಗರದ ಜಗತ್ ಸರ್ಕಲ್ ಬಳಿಯ ಉರ್ದು ಶಾಲೆಗೆ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಗೈರಾಗಿದ್ದಾರೆ. 8, 9,10 ನೇ ತರಗತಿಯ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರಾಗಿದ್ದು, ರಜೆ ಇಲ್ಲದೆ ಇದ್ರೂ ವಿದ್ಯಾರ್ಥಿನಿಯರು ಕ್ಲಾಸ್ನತ್ತ ತಿರುಗಿ ನೋಡುತ್ತಿಲ್ಲ. ಉರ್ದು ಶಾಲೆಯ ಕ್ಲಾಸ್ ರೂಮ್ಗಳೆಲ್ಲಾ ಖಾಲಿ ಖಾಲಿಯಾಗಿದ್ದು, ಎಂದಿನಂತೆ ಸ್ಕೂಲ್ಗೆ ಶಿಕ್ಷಕರು, ಸಿಬ್ಬಂದಿ ಬಂದಿದ್ದಾರೆ.