ಮಂಡ್ಯ: ಹಿಜಾಬ್ ಸಂಘರ್ಷದಲ್ಲಿ ಮಂಡ್ಯದಲ್ಲಿ ದಿಟ್ಟತನ ತೋರಿದ ವಿದ್ಯಾರ್ಥಿನಿ ಮುಸ್ಕಾನ್ ಈಗ ಎಲ್ಲೆಡೆ ಭಾರೀ ಸದ್ದು ಮಾಡ್ತಿದ್ದಾರೆ. ಹಿಜಾಬ್ ವಿರೋಧಿಸಿ ಜೈ ಶ್ರೀರಾಮ್ ಅಂತಾ ಕೂಗುತ್ತಾ ಬರ್ತಿದ್ದ ವಿದ್ಯಾರ್ಥಿಗಳ ಎದುರು ಅಲ್ಲಾ ಹು ಅಕ್ಬರ್ ಎಂದು ಕೂಗುತ್ತಾ ಮಂಡ್ಯ ಪಿಇಎಸ್ ಕಾಲೇಜಿನ ಮುಸ್ಕಾನ್ ಪ್ರತಿರೋಧ ತೋರಿದ್ದರು. ಹಿಜಾಬ್ ನನ್ನ ಹಕ್ಕು ಎಂದು ಕೂಗಿದ್ದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡ್ತಾ ಇದೆ. ಏಕಾಂಗಿ ಹೋರಾಟ ಹಲವರ ಚರ್ಚೆಯ ವಿಷಯವೂ ಆಗಿದೆ.
ಇದನ್ನೂ ಓದಿ:ಹಿಜಾಬ್ ಬಿರುಗಾಳಿ ಹೊತ್ತಲ್ಲೇ ಇಂದು ಸಂಪುಟ ಸಭೆ..! ಬೆಳಗ್ಗೆ 11 ಗಂಟೆಗೆ ಸಿಎಂ ನೇತೃತ್ವದಲ್ಲಿ ಮೀಟಿಂಗ್..!