ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ನಿಷೇಧ ಮಾಡಲು ಸರ್ಕಾರ ಮುಂದಾಗಿದ್ದು,
ಸಮವಸ್ತ್ರ ಸಂಹಿತೆ ಪರ ಸರಕಾರ ಒಲವು ತೋರುತ್ತಿದೆ.
ಮುಂದಿನ ವರ್ಷದಿಂದ ಹೊಸ ವಸ್ತ್ರ ಸಂಹಿತೆ ಬರಲಿದ್ದು, ಕಾಲೇಜಿಗೂ ಯೂನಿಫಾರ್ಮ್ ಕಡ್ಡಾಯ ಮಾಡೋ ಚಿಂತನೆ ನಡೆಸಲಾಗುತ್ತಿದೆ. ಉಡುಪಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹಿಜಾಬ್ ಬ್ಯಾನ್ ಮಾಡಿದ್ರೆ ಉಗ್ರ ಹೋರಾಟ ನಡೆಯುವ ಸಾಧ್ಯತೆ ಇದೆ. ಹಿಜಾಬ್ ಬ್ಯಾನ್ ವಿರುದ್ಧ ಹೋರಾಡಲು ಪ್ರತಿಪಕ್ಷಗಳೂ ರೆಡಿಯಾಗಿದ್ದು, ಉಡುಪಿ ಘಟನೆ ಬಳಿಕ ಪರ-ವಿರೋಧ ಚರ್ಚೆ ತೀವ್ರಗೊಂಡಿದೆ. ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶ ಕೊಡಿ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಮನವಿ ಮಾಡಿದ್ದರು. ಸಮವಸ್ತ್ರ ಇರುವುದರಿಂದ ಇದಕ್ಕೆ ಕಾಲೇಜು ಅವಕಾಶ ನಿರಾಕರಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಜಮ್ತಾರಾ ಗ್ಯಾಂಗ್ ಹಾವಳಿ ಸ್ಟಾರ್ಟ್… 15 ದಿನದಲ್ಲಿ ಬರೋಬ್ಬರಿ 85 ಕ್ರೆಡಿಟ್ ಕಾರ್ಡ್ ವಂಚನೆ…